ಹಾವೇರಿ ನಗರದ ಹೊರವಲಯದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡ ರಾತ್ರಿ ದರೋಡೆಕೋರರ ಗ್ಯಾಂಗ್ ವಾಹನ ತಡೆದು ಡ್ರೈವರ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆಗೊಳಿಸಿ ಹಣ,ಮೊಬೈಲ್ ಕಿತ್ತುಕೊಂಡು ಹೋಗಿದ್ದ ಮೂವರು ಹೆದ್ದಾರಿ ದರೋಡೆಕೋರರನ್ನು ಶಹರ ಠಾಣೆಯ ಪೊಲೀಸ್ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅಗಸ್ಟ್ 8 ತಡರಾತ್ರಿ ನಡೆದ ಘಟನೆ ಬಗ್ಗೆ ಪುಟ್ಟಪ್ಪ ಸುಣಗಾರ ಹಾಗೂ ಜಗದೀಶ ಬಾರ್ಕಿ ಮರುದಿನ ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಶಹರ ಠಾಣಾ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಚುರುಕಾದ ಕಾರ್ಯಚರಣೆ ನಡೆಸಲಾರಂಭಿಸಿದಾಗ ಆರೋಪಿಗಳ ಸುಳಿವು ಬಗ್ಗೆ ಬುಧವಾರ ಮಾಹಿತಿ ಸಿಗುತ್ತಿದ್ದಂತೆ ಜಾಗ ಗುರ್ತಿಸಿ ದಸ್ತಗಿರಿ ಮಾಡಿದ್ದಾರೆ.
ಎ1 ಆರೋಪಿ ಪ್ರವೀಣ ಬಸವರಾಜ ಕಟ್ಟಿಮನಿ ವಯಾ- 27 ಎ2 ಆರೋಪಿ ಸಾಗರ ರಾಮಪ್ಪ ಕಟ್ಟಿಮನಿ ವಯಾ-22 ಎ3 ಆರೋಪಿ ಕೃಷ್ಣಪ್ಪ ಜಯಪ್ಪ ಮೊದಲೇರಡು ಆರೋಪಿತರು ಹಾವೇರಿ ತಾಲೂಕಿನ ದೇವಿಹೊಸುರು ಮೂರನೇವನು ಸೊರಬ ತಾಲೂಕಿನ ಎಣ್ಣಿಕೊಪ್ಪ ಗ್ರಾಮದವರೆಂದು ತಿಳಿದ್ದು ಇಂಟರ ಲಾಕರ್ ಕೆಲಸ ಮಾಡಿಕೊಂಡು ದರೋಡೆ ಮಾಡಿ ತೆಲೆ ಮರೆಸಿಕೊಂಡಿದ್ದರು.
ಬುಧವಾರ ಸಂಜೆ ಶಹರ ಠಾಣೆಗೆ ಕರೆತಂದು ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದರೋಡೆಕೋರರಿಂದ ಒಂದು ಚಾಕು,ಕಬ್ಬಿನ ರಾಡ್ 3 ಮೊಬೈಲ್ ಪೋನ್ ಗಳು,ಒಂದು ಬೈಕ್ ಸೇರಿದಂತೆ 60 ಸಾವಿರ ಕಿಮ್ಮತ್ತಿನ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಸಿ.ಪಿ.ಐ ಮೋತಿಲಾಲ್ ಪವಾರ, ತನಿಖಾಧಿಕಾರಿಯಾದ ಪಿಎಸ್ ಐ ಎಂ.ಕೆ ಸೊರಟೂರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.