ರಾಣೆಬೆನ್ನೂರ : ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಕುಖ್ಯಾತ ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಹಿಡಿದು ಬಂಧಿಸಿ ಬಂಧಿತರಿಂದ ಬರೋಬ್ಬರಿ 23 ಲಕ್ಷ ಮೌಲ್ಯದ ಸುಮಾರು 29 ವಿವಿಧ ಕಂಪನಿಯ ಬೈಕಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಣೆಬೆನ್ನೂರ ಶಹರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ
ಹಾವೇರಿ,ಡಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ ಹಾಸನ,ಬೆಂಗಳೂರು , ಮಂಗಳೂರು,ಚಿಕ್ಕಮಗಳೂರ ಸೇರಿದಂತೆ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಬೈಕಗಳನ್ನು ಖದಿಯುತ್ತಿದ್ದ ಈ ಖದೀಮರು ಕದ್ದ ಬೈಕಗಳನ್ನು ಕೇವಲ ಐದು ಸಾವಿರ ರೂ,ಗಳಿಗೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು
ಹಿರೇಕೆರೂರಿನ ಮೆಹಬೂಬ್ ಮುಳಗೇರಿ ಖಲಂದರ್ ಪಠಾಣ, ಹುಬ್ಬಳ್ಳಿಯ ಎಸ್ ಎಂ ಕೃಷ್ಣನಗರದ ತನ್ವೀರ್ ಲಕ್ಷ್ಮೇಶ್ವರ ಎಂಬುವವರೇ ಬಂಧಿತ ಕಳ್ಳರಾಗಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಇನ್ನೊರ್ವ ಆರೋಪಿ ಹಬೀಬವುಲ್ಲಾ ಕಚವಿ ಪರಾರಿಯಾಗಿದ್ದು ಈತನ ಬಂಧನಕ್ಕೆ ಪೊಲೀಸರು ಜಾಲ ಬಿಸಿದ್ದಾರೆ
ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಂಶಕುಮಾರ ಸೂಚನೆಯ ಮೆರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ ಗೋಪಾಲ್ ಹಾಗೂ ರಾಣೆಬೆನ್ನೂರ ಉಪ ವಿಭಾಗದ Dysp ಡಾ, ಗಿರೀಶ ಭೋಜಣ್ಣವರ, CPI ಡಾ,ಎಸ್ ಕೆ ಶಂಕರ ಮಾರ್ಗದರ್ಶನಲ್ಲಿ ಕಾರ್ಯಾಚರಣೆ ನಡೆದಿತ್ತು
PSI ಗಡ್ಡೆಪ್ಪ ಗುಂಜಟಗಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಗ್ಗಪ್ಪ ದೊಡಮನಿ, ವೈ ಬಿ ಓಲೆಕಾರ, ಪಿ ಕೆ ಸನದಿ,ಹೆಚ್ ಎಲ್ ದೊಡಮನಿ,ಸಿ ಬಿ ಕಡ್ಲೆಪ್ಪನವರ, ಹೆಚ್ ಎಲ್ ಧನುವಿನಮನಿ, ವಿಠ್ಠಲ ಡಿ ಬಿ, ರಾಮರಡ್ಡಿ ಕುಸಗೂರ, ಮಾರುತಿ ಹಾಲಭಾವಿ, ತಾಂತ್ರಿಕ ವಿಭಾಗದ ಸತೀಶ ಮಾರಕಟ್ಟಿ, ಚಾಲಕ ಶ್ರೀಕಾಂತ ಕೊರವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು