ಕ್ರಿಕೆಟ್ಕ್ರೀಡೆ

ವಿಶ್ವ”ಕಪ್”ಗೆದ್ದ ಭಾರತ : ವಿದಾಯ ಹೇಳಿದ “ವಿರಾಟ್”..!

ಬ್ರಿಜ್ ಟೌನ್ : ಕೋಚ್ ರಾಹುಲ್ ದ್ರಾವಿಡ ಹಾಗೂ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ 13 ವರ್ಷಗಳ ನಂತರ ವಿಶ್ವಕಪ್T20 ಕ್ರಿಕೇಟ್ ಟೂರ್ನಿ ಯಲ್ಲಿ ಇಂದು ನಡೆದ ರಣ ರೋಚಕ ಪೈನಲ್ ಪಂದ್ಯದಲ್ಲಿ ಗೆದ್ದ ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿ T20 ವಿಶ್ಕಕಪ್ ನ್ನು ತನ್ನ ಮುಡಿಗೇರಿಸಿಕೊಂಡಿತು

ಕನ್ನಿಂಗ್ಟನ್ ಓವಲ್ ಸ್ಟೆಡಿಯಂ ನಲ್ಲಿ ನಡೆದ ಪೈನಲ್ ಪಂದ್ಯದಲ್ಲಿ  ಟಾಸ್ ಗೆದ್ದು ಮೊದಲಿಗೆ ಬ್ಯಾಟ್ ಮಾಡಿದ ಭಾರತ ತನ್ನ 20 ಓವರ್ ನಲ್ಲಿ 7 ಕ್ಕೆ 176 ರನ್ನಗಳನ್ನ ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲೊನ್ನಡಿತು ನಂತರ ಈ ಗುರಿಯನ್ನ ಬೆನ್ನತ್ತಿದ ದಕ್ಷಿಣ ಆಪ್ರಿಕಾ ತಂಡ 20 ನೇ ಓವರನಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಕೂನೆಯ ಓವರನಲ್ಲಿ ಸೂರ್ಯಕುಮಾರ ಯಾದವ್ ಬೌಂಡರಿ ಲೈನನಲ್ಲಿ ಹಿಡಿದ ಅದ್ಬುತ ಕ್ಯಾಚಿನ ಪರಿಣಾಮ ಭಾರತಕ್ಕೆ ಶರಣಾಯಿತು.

ದಕ್ಣಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಬೆನ್ನಲಬನ್ನು ಮುರಿದ ಭಾರತದ ತಂಡದ ಬೌಲರಗಳಾದ ಹಾರ್ದಿಕ ಪಾಂಡ್ಯ 3, ಬೂಮ್ರಾ 2,ಅರ್ಷದೀಪ್, ಅಕ್ಷರ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರೆ ಬೂಮ್ರಾ ಸರಣಿ ಶ್ರೇಷ್ಠ ಮತ್ತು ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು

ಹೊಸ ಆಟಗಾರರಿಗೆ ಅವಕಾಶಗಳು ಸಿಗಲಿ ಎಂಬ ಉದಾರತೆಯೊಂದಿಗೆ ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ಅಂತರರಾಷ್ಟ್ರಿಯ T20 ಕ್ರಿಕೇಟ್ ಗೆ ವಿದಾಯ ಘೋಷಿಸಿದ್ದು ಮಾತ್ರ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ಭಾರತದ ಅಸಂಖ್ಯಾತ ಕ್ರಿಕೇಟ್ ಅಭಿಮಾನಿಗಳಿಗೆ ತೀವ್ರ ಅಘಾತವನ್ನುಂಟು ಮಾಡಿತು.

Leave a Reply

Your email address will not be published. Required fields are marked *