ಉತ್ತರ ಕರ್ನಾಟಕಕರ್ನಾಟಕ

ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ “ಬಲರಾಮನ ದಿನಗಳು” ಚಿತ್ರ ತಂಡದಿಂದ “ಬಿಗ್ ಅನೌನ್ಸ್ಮೆಂಟ್ “

ಬೆಂಗಳೂರು: ಆಗಸ್ಟ್ 23 ರಂದು “ಪದ್ಮಾವತಿ ಫಿಲಂಸ್” ನಿರ್ಮಾಣದ “ಆ ದಿನಗಳು” ಖ್ಯಾತಿಯ ಕೆ.ಎಂ .ಚೈತನ್ಯ ನಿರ್ದೇಶನದ ಸಿನಿಮಾ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ “ಬಲರಾಮನ ದಿನಗಳು” ಚಿತ್ರ ತಂಡದಿಂದ “ಬಿಗ್ ಅನೌನ್ಸ್ಮೆಂಟ್* “

ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ “ಬಲರಾಮನ ದಿನಗಳು” ಚಿತ್ರವನ್ನು ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ನಿರ್ಮಾಣ‌ ಮಾಡುತ್ತಿದ್ದಾರೆ. “ಆ ದಿನಗಳು” ಖ್ಯಾತಿಯ ಕೆ‌.ಎಂ.ಚೈತನ್ಯ ರವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಚಿತ್ರದ ಮೊದಲ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಆಗಸ್ಟ್ 23 ರಂದು “ಬಲರಾಮನ ದಿನಗಳು” ಚಿತ್ರದ ಕುರಿತು ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಅದೇನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿದೆ. ಒಟ್ಟಿನಲ್ಲಿ ಪದ್ಮಾವತಿ ಫಿಲಂಸ್ ನಿರ್ಮಾಣದ, ಕೆ.ಎಂ.ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Leave a Reply

Your email address will not be published. Required fields are marked *