ಚಿಕ್ಕಮಗಳೂರ : ತುಮಕೂರ ಜಿಲ್ಲಾಧಿಕಾರಿಯ ಕಚೇರಿ ಸೇರಿಂದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಕಚೇರಿಗಳನ್ನೇ ಗುರಿಯಾಗಿಸಿ ಪ್ರಿಂಟರಗಳನ್ನು ಕದ್ದು ಬೆಂಗಳೂರ, ತಿಪಟೂರಿನಲ್ಲಿ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರ ಜಿಲ್ಲೆಯ ಕಡೂರ ಪೊಲೀಸ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ
NGO ವೊಂದರಲ್ಲಿ ಡಾಟಾ ಎಂಟ್ರಿ ಉದ್ಯೋಗಿಯಾಗಿದ್ದ ತುಮಕೂರ ಜಿಲ್ಕೆ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದ ಆಕಾಶ@ ಸುಭಾಸ್ ಎಂಬ ಬಂಧಿತ ಆರೋಪಿಯಿಂದ ಅಂದಾಜು 1ಲಕ್ಷ 32 ಸಾವಿರ ರೂ, ಬೆಲೆಬಾಳುವ ಸುಮಾರು 79 ಕ್ಕೂ ಹೆಚ್ಚು ಪ್ರಿಂಟರ್ ಗಳನ್ನು ವಶಪಡಿಸಿಕೊಂಡ ಪೊಲೀಸರು ಬಂಧಿತ ಆಸಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ನವೀನ ಕುಮಾರ, ಪಿಎಸ್ಐ ಪವನಕುಮಾರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಿಗಾದ ಮಧು, ಹರೀಶ್, ಸ್ವಾಮಿ, ಮಂಜುನಾಥಸ್ವಾಮಿ, ಬಿರೇಶ, ಬ್ರೇಕ್, ದೇವರಾಜ್, ಮಹ್ಮದ ರಿಯಾಜ್, ಈಶ್ವರಪ್ಪ, ಧನಪಾಲ ನಾಯ್ಕ್ ರವಿಕುಮಾರ, ಕಿಶೋರ್, ಜಯಮ್ಮಾ, ತಾಂತ್ರಿಕ ವಿಭಾಗದ ನಯಾಜ್ ಅಂಜುಮ್, ಅಬ್ದುಲ್ ರಬ್ಬಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಉತ್ತಮ ಕರ್ತವ್ಯ ನಿರ್ವಹಿಸಿದ ತಂಡವನ್ನು ಚಿಕ್ಕಮಗಳೂರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಪ್ರಶಂಸಿ ಬಹುಮಾನ ಘೋಷಿಸಿದ್ದಾರೆ.