ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿರುವ ಘಟನೆ ಅಶೋಕನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಷ್ಟೇ ನಡೆದಿದೆ.
ಹುಬ್ಬಳ್ಳಿಯ ಮಾಧವ್ ನಗರದಲ್ಲಿ ಈ ಒಂದು ಘಟನೆ ಜರುಗಿದ್ದು, ಸುಮಾರು 7 ವರ್ಷದ ಬಾಲಕಿಯ ಮೇಲೆ 55 ವರ್ಷದ ನೂರ್ ಅಹಮದ್ ಅನ್ನೋ ಕ್ರೂರಿ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತನ್ನ ಮೊಮ್ಮಗಳ ವಯಸ್ಸಿನ ಬಾಲಕಿಯನ್ನು ಆಟವಾಡಿಸುವ ನೆಪದಲ್ಲಿ ಕ್ರೌರ್ಯ ಮೆರೆದಿದ್ದಾನೆ.
ಘಟನೆ ಕುರಿತಂತೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದ್ದು, ಅಶೋಕ ನಗರ ಠಾಣೆಯ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ.