ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ್ ಪೇಟೆಯಲ್ಲಿ ಇಬ್ಬರ ಕೊಗ್ಗೊಲೆ ನಡೆದಿದೆ. ಮಾರ್ಕೆಟಿಂಗ್ ಕಚೇರಿಗೆ ನುಗ್ಗಿ ಎಲ್ಲರ ಎದುರೇ ಕೊಚ್ಚಿ ಇಬ್ಬರನ್ನು ಕೊಲೆ (Double Murder) ಮಾಡಲಾಗಿದೆ. 55 ವರ್ಷದ ಸುರೇಶ್ ಮತ್ತು 68 ವರ್ಷದ ಮಹೇಂದ್ರ ಎಂಬವರು ಸಾವನ್ನಪ್ಪಿದ್ದಾರೆ. ಆಸ್ತಿ ವಿಚಾರಕ್ಕೆ ಭದ್ರ ಎಂಬ ಸಂಬಂಧಿಕನಿಂದಲೇ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಡಿಸಿಪಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯ ಬಳಿಕ ಆರೋಪಿ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಎರಡು ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ತಂದೆ ಬುದ್ದಿವಾದ ಹೇಳಿದ್ದಕ್ಕೆ ಮಗ ಸೂಸೈಡ್!
ತಂದೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಚೇತನ್ ಕೊಂಡಿಹಾಳ ಕೆಲಗೇರಿ ಕೆರೆಗೆ ಹಾರಿ ಸೂಸೈಡ್ ಮಾಡಿಕೊಂಡಿರುವ ಯುವಕ.
ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಮಾಡಿ, ಓದಿನ ಕಡೆ ಗಮನ ಕೊಡು ಅಂತ ತಂದೆ ಬುದ್ದಿವಾದ ಹೇಳಿದ್ರಂತೆ. ಇದ್ರಿಂದ ಮನನೊಂದಿದ್ದ ಚೇತನ್ ಎರಡು ದಿನಗಳಿಂದ ನಾಪತ್ತೆ ಆಗಿದ್ದ. ಇಂದು ಬೆಳಗ್ಗೆ ಕೊಂಡಿಹಾಳ ಕೆಲಗೇರಿ ಕೆರೆಯಲ್ಲಿ ಶವ ಪತ್ತೆ ಆಗಿದೆ.
ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ನಾಪತ್ತೆ
ಪ್ರವಾಸಕ್ಕೆ ಬಂದಿದ್ದ ಜಪಾನ್ ದೇಶದ ಮಹಿಳೆ ನಾಪತ್ತೆಯಾಗಿದ್ದಾರೆ. ಗೋಕರ್ಣಕ್ಕೆ ಪ್ರವಾಸಕ್ಕಾಗಿ ಬಂದಿದ್ದ ಈ ಮಹಿಳೆ ಬಂಗ್ಲೆಗುಡ್ಡ ವಸತಿಗೃಹ ಒಂದರಲ್ಲಿ ವಾಸವಿದ್ದರು.
ಈ ವಸತಿಗೃಹದಿಂದ ಹೊರ ಹೋಗಿ ಬರುತ್ತೇನೆ ಎಂದವರು ವಾಪಾಸ್ ಬಂದಿಲ್ಲ ಎಂದು ಆಕೆಯ ಪತಿ ಗೋಕರ್ಣ ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ
ಶಾಲೆ ಬಳಿ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ ನಡೆದಿದೆ. ಈ ಘಟನೆ ಚಿಕ್ಕೋಡಿ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ವಿದ್ಯಾರ್ಥಿನಿ ಶಾಲೆಯಿಂದ ಹೊರಗಡೆ ಬರುತ್ತಿದ್ದಂತೆ 200 ಮೀಟರ್ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ದುಷ್ಕರ್ಮಿಗಳ ಕೈಗೆ ಕಚ್ಚಿ ಎಸ್ಕೇಪ್ ಆಗಿದ್ದಾಳೆ.
ವಿದ್ಯಾರ್ಥಿನಿಯ ಚೀರಾಟ ಕೆೇಳಿ ಕಿಡ್ನ್ಯಾಪರ್ಸ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಚಿಕ್ಕೋಡಿಯಲ್ಲಿ ಮಕ್ಕಳ ಕಳ್ಳರ ಕುರಿತು ಪೊಲೀಸ್ ಪ್ರಕಟನೆ ಜಾರಿ ಮಾಡಲಾಗಿದೆ.