ಧಾರವಾಡ : ಭಾರತೀಯ ವೈದ್ಯಕೀಯ ಸಂಘ ಧಾರವಾಡ ಶಾಖೆ ವತಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಒಂದು ದಿನದ ಒ.ಪಿ.ಡಿ ಸೇವೆಯನ್ನು ರದ್ದುಗೊಳಿಸುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಧಾರವಾಡ ಶಾಖೆ, ಆಯ್ಯುಷ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಶ್ರೀಯಾ ಕಾಲೇಜ್ ಧಾರವಾಡ ಇವರ ಸಂಯೋಗದಲ್ಲಿ ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಆತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ದೇಶಾದ್ಯಂತ ಆಕ್ರೋಶ ಮುಂದುವರೆದಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ 17 ರಂದು ಬೆಳ್ಳಿಗ್ಗೆ 6 ರಿಂದ 18 ರ ಬೆಳ್ಳಿಗ್ಗೆ 6 ಗಂಟೆಯ ವರೆಗೆ ಧಾರವಾಡದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಯನ್ನು ಹೊರತುಪಡಿಸಿ ಓಪಿಡಿ ಸೇವೆಯನ್ನು ರದ್ದುಗೊಳ್ಳಿಸಿರುತ್ತಾರೆ.
ಪ್ರತಿಭಟನಾ ಮೆರವಣಿಗೆ 17/08/2024 ರ ಬೆಳ್ಳಿಗೆ 10 ಗಂಟೆಗೆ ಕಲಾಭವನ ಆವರಣದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಹಮ್ಮಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.