ಕಲಘಟಗಿ : ಪಟ್ಟಣದ ಹನ್ನೆರಡು ಸಾವಿರ ಮಠದ ಹತ್ತಿರ ಪಾಳು ಬಿದ್ದ ಶಾಲೆಯಲ್ಲಿ ನಲವತೈದು ವಯಸ್ಸಿನ ಮಾನಸಿಕ ಗರ್ಭಿಣಿ ಮಹಿಳೆಯೋಬ್ಬಳು ಹೆರಿಗೆ ಆದ ಘಟನೆ ನಡೆದಿದೆ.
ಪಾಳುಬಿದ್ದ ಶಾಲೆಯಲ್ಲಿ ಮಹಿಳೆಯ ಚಿರಾಟ ಕೇಳಿ ಬಂದಿದೆ. ಅಷ್ಟರಲ್ಲಿ ಅಲ್ಲಿಯೇ ಹೊರಟಿದ್ದ ಪೊಲೀಸ ಸಿಬ್ಬಂದಿ ಸಿ ಪಿ ವಿನಾಯಕ ಎಂಬುವವರಿಗೆ ಧ್ವನಿ ಕೇಳಿ ಬಂದಿದ್ದು, ಕೂಡಲೇ ಸ್ಥಳಕ್ಕೆ ಹೋಗಿದ್ದಾರೆ. ಸ್ಥಳದಲ್ಲಿ ಗರ್ಭಿಣಿ ಮಹಿಳೆಯು ಬತ್ತಲೆಯಾಗಿ ಹೆರಿಗೆ ನೋವಿನಿಂದ ಒದ್ದಾಡುತ್ತಿರುವುದು ಕಂಡುಬಂದಿದೆ.
ಕೂಡಲೇ ಪೊಲೀಸ್ ಸಿಬ್ಬಂದಿ ವಿನಾಯಕ ಅಲ್ಲಿಯ ಸ್ಥಳೀಯ ಮಹಿಳೆಯರನ್ನು ಕರೆದರೂ ಯಾರು ಕೂಡ ಸಹಾಯಕ್ಕೆ ಬಾರದೆ ಇರುವ ಕಾರಣ ಸಿಬ್ಬಂದಿ ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ತಕ್ಷಣ ಪಿಎಸ್ಐ ಬಸವರಾಜ ಯತ್ತಿನಗುಡ್ಡ ಹಾಗೂ ಮಹಿಳಾ ಸಿಬ್ಬಂದಿ ಜ್ಯೋತಿ ಚಂದನವರ ರವರು ಬಟ್ಟೆಗಳನ್ನು ತೆಗೆದುಕೊಂಡು ಸ್ಥಳಕ್ಕೆ ಆಗಮಿಸಿದ್ದಾರೆ.
ಅಷ್ಟರಲ್ಲಿ ಮಹಿಳೆ ಹೆರಿಗೆ ಆಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ತಾಯಿ ಹಾಗೂ ಮಗುವನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ತಾಯಿ ಹಾಗೂ ಮಗು ಅರೋಗ್ಯದಿಂದ ಇದ್ದಾರೆ.
ವಿಪರ್ಯಾಸ ಅಂದರೆ ಮಾನವೀಯತೆ ಮರೆತ ಜನರು ಅಂತಹ ಸಂದರ್ಭದಲ್ಲಿ ಯಾರು ಕೂಡ ಸಹಾಯಕ್ಕೆ ಬಾರದೇ ಇರೋದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಬೇಸರ ಉಂಟು ಮಾಡಿದೆ.ಈ ಒಂದು ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.