ಅಪರಾಧಹುಬ್ಬಳ್ಳಿ

ಹುಬ್ಬಳ್ಳಿ “ಕ್ರೈಂ” ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕಳ್ಳರು,8 ಪ್ರಕರಣ, 19 ಲಕ್ಷ 50 ಸಾವಿರ ಮೌಲ್ಯದ ಬಂಗಾರ, ಬೆಳ್ಳಿ ಜಪ್ತಿ..!

ಹುಬ್ಬಳ್ಳಿ : ನಗರದ ಗೋಕುಲ್ ರೋಡ್, ವಿದ್ಯಾನಗರ ಹಾಗೂ ಬೆಳಗಾವಿಯ ಮಾಳಮಾರುತಿ, ಮಾರಿಹಾಳ, ಖಾನಪೂರ, ಹೀಗೆ ಬೇರೆ ಬೇರೆ ಪೊಲೀಸ ಠಾಣಾ  ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಕಿಲಾಡಿ ಕಳ್ಳರನ್ನು ಹಿಡಿದು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಟ್ಟು 8 ಪ್ರಕರಣಗಳನ್ನು ಭೇಧಿಸುವಲ್ಲಿ ಗೋಕುಲ್ ರೋಡ್ ಪೊಲೀಸ ಠಾಣೆಯ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ

ಕಳೆದ ಹಲವು ದಿನಗಳಿಂದ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಮನೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದುದರಿಂದ ಕಳ್ಳರನ್ನು ಆದಷ್ಟು ಬೇಗ ಪತ್ತೆ ಮಾಡುವಂತೆ ಹಿರಿಯ ಅಧಿಕಾರಗಳು ಸೂಚಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಅಪರಾಧ ವಿಭಾಗದ ಪೊಲೀಸರ ತಂಡ
ದೀಪಕ @ ರೋಹನ ನಾಗೇಂದ್ರ ಮಾತಂಗಿ, ಶಿವನಾಗಯ್ಯ @ ಶಿವನಾಗ ಮುತ್ತಯ್ಯ ಉಚ್ಚಂಗಿಮಠ ಎಂಬ ಕಳ್ಳರನ್ನು ಬಂಧಿಸಿ ಬಂಧಿತರಿಂದ ಸುಮಾರು 19 ಲಕ್ಷ 50 ಸಾವಿರ ಮೌಲ್ಯದ ಬೆಲೆ ಬಾಳುವ 240 ಗ್ರಾಂ, ಬಂಗಾರ ಹಾಗೂ 2500 ಗ್ರಾಂ, ಬೆಳ್ಳಿಯ ಆಭರಣಗಳನ್ನು ಹಾಗೂ 1 ಲ್ಯಾಪಟಾಪ್,1 ಸ್ಕೂಟಿ, 2 ವಾಚ್ ಸೇರಿದಂತೆ ಕಳ್ಳತನ ಮಾಡಲು ಉಪಯೋಗಿಸಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಬಂಧಿತ ಕಳ್ಳರನ್ನು ಜೈಲಿಗಟ್ಟಿದ್ದಾರೆ

ಹಿರಿಯ ಪೊಲೀಸ ಅಧಿಕಾರಿಗಳಾದ  DCP ರವೀಶ್, DCP ಮಹಾನಿಂಗ ನಂದಗಾವಿ  ಉತ್ತರ ವಲಯದ ACP ಶಿವಪ್ರಕಾಶ ನಾಯಕ ಮಾರ್ಗದರ್ಶನದಲ್ಲಿ PI ಪ್ರವೀಣ ನಿಲಮ್ಮನವರ ನೇತೃತ್ವದಲ್ಲಿ PSI ದೇವೆಂದ್ರ ಮಾವಿನಂಡಿ  ASI ಜೆ ಸಿ ರಜಪೂತ ಸಿಬ್ಬಂದಿಗಳಾದ ವಸಂತ ಗುಡಗೇರಿ, ರಾಜು ಹೊಂಕಣದವರ, ಚಂದ್ರು ನಡುವಿನಮನಿ, ಜಗದೀಶ ಮತ್ತಿಕಟ್ಟಿ, ಪ್ರಕಾಶ ತಗಡಿನಮನಿ,  ಮಹೇಶ ಬೆನ್ನೂರ, ಸುರೇಶ ಕೋಲಿ, ಶರಣಪ್ಪ ಕೋರಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ತಟಡದ ಕಾರ್ಯಾವನ್ನು ನೂತನ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಶ್ಲಾಘಿಸಿದ್ದಾರೆ

Related Posts

Leave a Reply

Your email address will not be published. Required fields are marked *