ರಾಯಚೂರು : ವಾಲ್ಮೀಕಿ ಅಭಿವೃದ್ಧಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬುಧವಾರ ಬೆಳಿಗ್ಗೆ 7 ಕ್ಕೆ, ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿರುವ ವಾರ್ಡ್ ನಂ 2 ರಲ್ಲಿ ಇರುವ ಬಸವರಾಜ ದದ್ದಲ ಮನೆ ಮೇಲೆ ಇಡಿ ಅಧಿಕಾರಿಗಳ ತಂಡ ರೇಡ ಮಾಡಿದೆ.
5 ಜನ ಅಧಿಕಾರಿಗಳು ಇರುವ ತಂಡ ಆಗಮಿಸಿದ್ದು, ಎಸ್ಐಟಿ ನೋಟಿಸ್ ಕೊಟ್ಟಿದ್ದು, ವಿಚಾರಣೆಗೂ ಸಹ ಕರೆದಿದೆ. ಏಕಾಏಕಿ ಇಡಿ ರೈಡ್ ಮಾಡಿರುವುದರ ಉದ್ದೇಶ ಏನು? ಎಂಬುವುದು ಮಾಹಿತಿ ತಿಳಿಯಬೇಕಾಗಿದೆ.
ಅಧಿಕಾರ ಸ್ವೀಕಾರ ಮಾಡಿದ ಕೇವಲ 1 ತಿಂಗಳಲ್ಲಿ 400 ಎಕರೆ ಹಂಚಿದ ಆರೋಪನಾ? ಆಥವಾ ನಿಗಮದ ಹಣಕಾಸು ಅವ್ಯವಹಾರ ಕಾರಣವಾ ? ಎನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿಯಬೇಕಾಗಿದೆ.