ಅಪರಾಧಹುಬ್ಬಳ್ಳಿ

” ಪೊಲೀಸ ಏರಿಯಾ ಡೊಮಿನೇಷನ್ ” ಜಾರಿಗೆ ತಂದ ನೂತನ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್…

ಸಮಾಜ ವಿರೋಧಿ ಶಕ್ತಿಗಳು ಸ್ಮಶಾನಗಳು, ಪಾಳುಬಿದ್ದ ಮನೆಗಳು ಮತ್ತು ಉದ್ಯಾನವನಗಳನ್ನು ಅಡಗುತಾಣಗಳಾಗಿ ಬಳಸುವುದನ್ನು ತಡೆಯುವುದೇ “ಪೋಲಿಸ್ ಏರಿಯಾ ಡೊಮಿನೆಷನ್” ನ ಉದ್ದೇಶವಾಗಿದೆ. ಸಮಾಜ ವಿರೋಧಿ ಶಕ್ತಿಗಳನ್ನು ಹೊರಹಾಕಲು ನಗರ ಪೊಲೀಸರು ರಾತ್ರಿ ವೇಳೆ ಸ್ಮಶಾನ, ಪಾಳುಬಿದ್ದ ಮನೆಗಳು, ಉದ್ಯಾನವನಗಳು ಮತ್ತು ಸೇತುವೆಗಳ ಅಡಿಯಲ್ಲಿ ಕಣ್ಗಾವಲು ಇರಿಸುವುದೇ ಇದರ ಉದ್ದೇಶ.

ಹಾಗಾಗಿ ಅವಳಿನಗರದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಬಗ್ಗೆ ಬಂದ ದೂರಿನ ಮೇರೆಗೆ ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಸಂಜೆ *ಪೊಲೀಸ್ ಏರಿಯಾ ಡಾಮಿನೇಷನ್* ಕ್ರಮವನ್ನೂ ಪೊಲೀಸರು ಕೈಗೊಂಡಿದ್ದಾರೆ.ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ 33 ಜನ ರೌಡಿ ಶೀಟರ್, 17 ಜನ ಹಳೇ MOB, 5 ಜನ ಹಳೆಯ ಗಾಂಜಾ ಮಾರಾಟಗಾರನ್ನೂ ವಶಕ್ಕೆ ಪಡೆದು, ಇವರುಗಳ ಹಿಂದಿನ ಹಾಗೂ ಇಂದಿನ ನಡವಳಿಕೆ ಮತ್ತು ಅವರ ಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿಗಸ್ತರ ಮೇಲೆ ಸೂಕ್ತ ಕ್ರಮವನ್ನೂ ಕೈಗೊಂಡಿದ್ದಾರೆ.

ಅಷ್ಟೆ ಅಲ್ಲದೆ ಸಾರ್ವಜನಿಕವಾಗಿ, ಹೊಸ ಲೇ ಔಟ್ ಗಳಲ್ಲಿ, ರಸ್ತೆಗಳಲ್ಲಿ ಕುಳಿತು ಮಧ್ಯವನ್ನು ಸೇವಿಸುತ್ತಿದ್ದ 24 ಜನರನ್ನೂ ವಶಕ್ಕೆ ಪಡೆದು. ಎಲ್ಲಾ 24 ಜನರ ಮೇಲೆಯೂ ಕಾನೂನು ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದ್ದಾರೆ.

ನೂತನವಾಗಿ ನೇಮಕಗೊಂಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಇವರ ಆದೇಶದ ಮೇರೆಗೆ ಡಿಸಿಪಿ ( ಕಾ & ಸು) ಡಿಸಿಪಿ (ಕ್ರೈಂ) ಹಾಗೂ ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಮತ್ತು ದಕ್ಷಿಣ ಉಪ ವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಫೀಲ್ಡ್ ಗೆ ಇಳಿದು ಕಾನೂನು ಸುವ್ಯವಸ್ಥೆ ಕೆಡೆಸುವ ಯಾವುದೇ ವ್ಯಕ್ತಿಯಾದರೂ ಸಹ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *