ಧಾರವಾಡ
ಲವ್ ಜಿಹಾದ ವಿರುದ್ದ ಫೇಸಬುಕ್ ಮೂಲಕ ಅಭಿಯಾನ ಶುರುಮಾಡಿದ್ದ , ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಅನೇಕರ ಫೇಸಬುಕ್ ಅಕೌಂಟ್‌ಗಳನ್ನು ಫೇಸ್ಟುಕ್ ಅಥಾರಿಟಿ ಬ್ಲಾಕ್ ಮಾಡಿದೆ. ಇದರಿಂದ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಸರ್ಕಾರ ಹಾಗೂ ಫೇಸಬುಕ್ ಅಥಾರಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲವ್ ಜಿಹಾದ್ ವಿರುದ್ಧ ಫೇಸ್ಟುಕ್ ಅಕೌಂಟ್‌ನಲ್ಲಿ ಜೋರಾಗಿ ಅಭಿಯಾನ ಆರಂಭವಾಗಿತ್ತು. ಈ ಅಭಿಯಾನಕ್ಕೆ ಉತ್ತಮ ಬೆಂಬಲ ಸಹ ಸಿಕ್ಕಿತ್ತು. ಇದರಿಂದ ಈ ಅಭಿಯಾನವನ್ನು ಹತ್ತಿಕ್ಕಲು ಫೇಸ್ಟುಕ್ ಅಕೌಂಟ್‌ಗಳನ್ನು ಬ್ಲಾಕ್ ಮಾಡಿದ್ದಾರೆ. ಇದರ ಹಿಂದೆ ಸರಕಾರ ಅಥವಾ ಬೇರೆ ಯಾರದ್ದೋ ಷಡ್ಯಂತ್ರ ಇರಬಹುದು. 18 ಜಿಲ್ಲಾ ಅಧ್ಯಕ್ಷರು, ವಿಭಾಗ ಪ್ರಮುಖರ ಫೇಸಬುಕ್ ಅಕೌಂಟ್‌ಗಳು ಓಪನ್ ಆಗುತ್ತಿಲ್ಲ. ಈ ಮೂಲಕ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆದಂತಾಗಿದೆ. ಇದನ್ನು ಸರಕಾರವೇ ಮಾಡಿದ್ದರೆ ಏಕೆ ಬ್ಲಾಕ್ ಮಾಡಲಾಗಿದೆ ಎಂದು ಕಾರಣ ಕೊಡಬೇಕು. ಫೇಸಬುಕ್ ಅಥಾರಿಟಿಯವರೇ ಮಾಡಿದ್ದರೆ, ಅವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು. ಐಟಿ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಗಮನಹರಿಸಬೇಕು ಎಂದು ಗಂಗಾಧರ ಕುಲಕರ್ಣಿ ಒತ್ತಾಯಿಸಿದ್ದಾರೆ.