ಧಾರವಾಡ : ಮನುಷ್ಯತ್ವ ಮಾನವೀಯತೆ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ವಿದ್ಯಾಕಾಶಿ ಧಾರವಾಡದಲ್ಲಿ ಅಪರೂಪದ ಘಟನೆ ನಡೆದಿದ್ದು, ಪ್ರಾಣಿಗಳಲ್ಲಿರುವ ಮಾನವೀಯತೆ ಎಂತಹದ್ದು ಎನ್ನುವುದು ಸಾಬೀತಾಗಿದೆ
ಧಾರವಾಡದ ಕಲ್ಲಂದರ ಮುಲ್ಲಾ ಎನ್ನುವರ ಮನೆಯಲ್ಲಿ ಈ ಘಟನೆ ನಡೆದಿದೆ. ನಾಯಿ ಹಾಗೂ ಬೆಕ್ಕಿನ ಮರಿ ಸಾಕಿದ್ದ ಕಲ್ಲಂದರ ಮುಲ್ಲಾ ಅವರಿಗೆ, ಏಕಾಏಕಿ ಮನೆಯಲ್ಲಿ ಸಾಕಿದ್ದ , ನಾಯಿ ಅಗಲಿಕೆ ಸಾಕಷ್ಟು ದು:ಖವನ್ನು ತರಿಸಿದ್ದು, ಅದಕ್ಕಾಗಿ ಅಂತ್ಯ ಸಂಸ್ಕಾರ ಮಾಡಿ, 3 ನೇ ದಿನದ ಕಾರ್ಯವನ್ನು ಮಾಡಿದ್ದಾರೆ.
2 ವರೆ ವರ್ಷದ ಜೋಯಾ ಎನ್ನುವ ನಾಯಿಮರಿ ಅನಾರೋಗ್ಯದ ನಿಮಿತ್ತ ನಿಧನ ಹೊಂದಿದ್ದು, ಅದರ ಜೋತೆಗೆ ಒಡನಾಟ ಹೊಂದಿದ್ದ ಬೆಕ್ಕಿನ ಮರಿಗೆ ದುಃಖ ತೊಡಿಕೊಳ್ಳಲಾರದೇ ಮೃತ ನಾಯಿ ಮರಿಯ ಮುಂದೆ ಕಣ್ಣೀರು ಹಾಕಿದೆ.
ಈ ದೃಶ ಮಾನವೀಯತೆ ಎನ್ನುವುದು ಪ್ರಾಣಿಗಳಲ್ಲಿ ಎಷ್ಟರ ಮಟ್ಟಿಗೆ ಇರುತ್ತೆ ಎನ್ನುವುದನ್ನು ತೋರಿಸಿಕೊಟ್ಟಂತೆ ಆಗಿದೆ.