ಉತ್ತರ ಕರ್ನಾಟಕರಾಜಕೀಯ

ಕಾರ್ಗಿಲ್ “ವಿಜಯ ದಿವಸ” ಹಿನ್ನೆಲೆ ಪಂಜಿನ ಮೆರವಣಿಗೆ ನಡೆಸಿದ BJP ಪದಾಧಿಕಾರಿಗಳು : ಮಾಜಿ ‘ಮೇಯರ್’ ಈರೇಶ ಅಂಚಟಗೇರಿ ಭಾಗಿ..!

ಧಾರವಾಡ: 25 ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಿನ್ನೆಯ ದಿನ ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಕಾರ್ಗಿಲ ಸ್ಥೂಪದವರೆಗೆ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಕಾರ್ಯಕರ್ತರು ಹಾಗೂ ಬಿಜೆಪಿಯ ಹಿರಿಯ ಮುಖಂಡರು ಪಂಜಿನ ಮೆರವಣಿಗೆ ನಡೆಸಿ,ಹುತಾತ್ಮ ವೀರಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ ಮಾತನಾಡಿ, ಕಾರ್ಗಿಲ ಯುದ್ದದಲ್ಲಿ ಉಗ್ರರ ವೇಷದಲ್ಲಿ ಬಂದ ಪಾಕಿಸ್ತಾನಿ ಸೈನಿಕರನ್ನ ಸದೆಬಡೆದು ಭಾರತ ದಿಗ್ವಿಜಯ ಸಾಧಿಸಿದ್ದು, ಇಂದಿಗೆ 25 ವರ್ಷಗಳು ಸಂದಿವೆ.

500ಕ್ಕೂ ಹೆಚ್ಚು ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿ ಭಾರತದ ದಿಗ್ವಿಜಯಕ್ಕೆ ಕಾತಣಿಭೂತರಾಗಿದ್ದು ಇದರಿಂದ ಕಾಶ್ಮೀರ ಇಂದಿಗೂ ಭಾರತದ ಭಾಗವಾಗಿ ಉಳಿಯಲು ಸಾಧ್ಯವಾಗಿದೆ.

ಆರ್ಟಿಕಲ್ 370 ತೆಗೆದು ಹಾಕಲು ಮೂಲಭೂತಕಾರಣವಾಗಿದ್ದು, ಕಾರ್ಗಿಲ ವಿಜಯ ಹಾಗು ನೂರು ದಿನಗಳ ಕಾಲಕಿಂತ ಹೆಚ್ಚು ನಡೆದ ಯುದ್ದದಲ್ಲಿ ಅಂದಿನ ಪ್ರಧಾನಮಂತ್ರಿ ಅಟಲಬಿಹಾರಿ ವಾಜಪೇಯಿ ಹಾಗು ಬಿಜೆಪಿ ಸರಕಾರದ ದಿಟ್ಟನಡೆ ಶ್ಲಾಘನೀಯ ಹಾಗೂ ಈ ದಿಗ್ವಿಜಯ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ , ಟಿ.ಎಸ.ಪಾಟೀಲ, ವಿಜಯಾನಂದ ಶೆಟ್ಟಿ,
ಶಕ್ತಿ ಹಿರೇಮಠ , ಬಸವರಾಜ ಗರಗ, ಪವನ ಥಿಟೆ, ರಾಹುಲ ಮಲ್ಲಿಗವಾಡ, ಹಾಗೂ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *