ಸಕ್ಕರೆಕಾಯಿಲೆ ಇದ್ದವರು, ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಹಾಗೂ ಕಡಿಮೆ ಕಾರ್ಬೋ ಹೈಡ್ರೇಟ್ ಅಂಶಗ ಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು
ಮಧುಮೇಹ ಅಥವಾ ಸಕ್ಕರೆಕಾಯಿಲೆ ಮನುಷ್ಯನನ್ನು ಜೀವಂತವಾಗಿ ಕೊಲ್ಲುವಂತಹ ಕಾಯಿಲೆ. ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ, ಅದರಿಂದ ಹೊರಬರಲು ಆಗದು, ಯಾಕೆಂದ್ರೆ ಈ ಕಾಯಿಲೆಗೆ ಸಂಪೂರ್ಣ ಮುಕ್ತಿ ಎನ್ನುವುದು ಇಲ್ಲ. ಆದರೆ ವೈದ್ಯರ ಸಲಹೆ, ದೈನಂದಿನ ಔಷಧಿ ಹಾಗೂ ಕೆಲವೊಂದು ಆಹಾರ ಪದಾರ್ಥಗಳನ್ನು ಅಚ್ಚುಕಟ್ಟಾಗಿ ಅನುಸರಿಸಿಕೊಂಡು ಹೋದರೆ, ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸ ಬಹುದು ಎನ್ನುತ್ತಾರೆ ತಜ್ಞರು
ಮೊಟ್ಟ ಮೊದಲಿಗೆ ಈ ಕಾಯಿಲೆ ಇರುವ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ಜಾಗರೂಕತೆ ವಹಿಸಬೇಕು. ಏಕೆಂದರೆ ಆಹಾರಪದ್ಧತಿಯಲ್ಲಿ ಸ್ವಲ್ಪ ಏರುಪೇರಾ ದರೆ ಅದರ ನೇರ ಪರಿಣಾಮ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಉಂಟಾಗುತ್ತದೆ. ಅಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದಂತೆ ಏರಿಕೆ ಆಗುತ್ತದೆ. ಹಾಗಾಗಿ ಯಾವ ಆಹಾರಗಳನ್ನು ತಿನ್ನಬೇಕು ಮತ್ತು ಯಾವ ಆಹಾರ ಪದಾರ್ಥಗಳಿಂದ ದೂರವಿರಬೇಕು ಎನ್ನುವ ಬಗ್ಗೆ ಮಧುಮೇಹಿಗಳು ಮೊದಲು ತಿಳಿದು ಕೊಂಡಿರಬೇಕು. ಪ್ರಮುಖ ವಾಗಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹಾಗೂ ಕಾರ್ಬೋ ಹೈಡ್ರೇಟ್ ಅಂಶಗಳನ್ನು ಒಳಗೊಂಡಿ ರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬನ್ನಿ ಇಂದಿನ ಲೇಖನದಲ್ಲಿ ಶುಗರ್ ಕಂಟ್ರೋಲ್ ನಲ್ಲಿಡುವ ತರಿಕಾರಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ ಮುಂದೆ ಓದಿ.
- ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹಾಗೂ ಕಾರ್ಬೋ ಹೈಡ್ರೇಟ್ ಅಂಶಗಳನ್ನು ಹೊಂದಿರುವ ತರಕಾರಿ.ಈ ಎರಡೂ ಆರೋಗ್ಯಕಾರಿ ಅಂಶಗಳು, ಆಹಾರದಲ್ಲಿ ಸಿಗುವ ಸಕ್ಕರೆ ಪ್ರಮಾಣವನ್ನು ರಕ್ತದಲ್ಲಿ ಬೆರೆತು ಹೆಚ್ಚಾಗದಂತೆ ನೋಡಿ ಕೊಳ್ಳುತ್ತದೆ.
- ಇನ್ನೂ ಪ್ರಮುಖವಾಗಿ ಈ ತರಕಾರಿಯಲ್ಲಿ ಯಥೇಚ್ಛವಾಗಿ ಕರಗುವ ಮತ್ತು ಕರಗದಿರುವ ನಾರಿನ ಅಂಶ ಕಂಡು ಬರುವುದ ರಿಂದ, ನಾವು ಸೇವನೆ ಮಾಡುವ ಆಹಾರ ಪದಾರ್ಥಗಳು, ಹೊಟ್ಟೆಯಲ್ಲಿ ಜೀರ್ಣ ವಾಗಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ.
- ಈ ಕಾರಣದಿಂದ ನಾವು ಸೇವನೆ ಮಾಡಿದ ಆಹಾರದಲ್ಲಿ ಸಿಗು ವಂತಹ ಸಕ್ಕರೆ ಅಂಶ ರಕ್ತದ ಹರಿವಿಗೆ ತುಂಬಾ ನಿಧಾನವಾಗಿ ಬಿಡುಗಡೆಯಾ ಗುತ್ತದೆ. ಇದರಿಂದ ಆಹಾರ ಸೇವನೆ ಮಾಡಿದ ನಂತರ ಇದ್ದಕ್ಕಿದ್ದಂತೆ ಸಕ್ಕರೆ ಅಂಶ ರಕ್ತದಲ್ಲಿ ಹೆಚ್ಚಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ದಪ್ಪಮೆಣಸಿನಕಾಯಿ
- ದಪ್ಪಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಮಧುಮೇಹಿಗಳು ತಮ್ಮ ಆಹಾರ ಕ್ರಮ ದಲ್ಲಿ ಈ ತರಕಾರಿ ಯನ್ನು ಸೇರಿಸಿಕೊಂಡರೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
- ಆಯುರ್ವೇದ ಪದ್ಧತಿಯಲ್ಲಿ ಕೂಡ ದಪ್ಪ ಮೆಣಸಿ ನಕಾಯಿ ಅಥವಾ ಕ್ಯಾಪ್ಸಿಕಂ, ಮಧುಮೇಹಿಗಳರಕ್ತದಲ್ಲಿನ ಸಕ್ಕರೆ ಪ್ರಮಾಣ ವನ್ನು ಏರಿಕೆ ಆಗದಂತೆ ನಿಯಂತ್ರಣ ಮಾಡುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಈ ತರಕಾರಿ ಯನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು
I have a personal philosophy in life: If somebody else can do something that I’m doing, they should do it. And what I want to do is find things that would represent a unique contribution to the world – the contribution that only I, and my portfolio of talents, can make happen. Those are my priorities in life.
There’s a lot to do in space. I want to learn more about the greenhouse effect on Venus, about whether there was life on Mars, about the environment in which Earth and the Sun is immersed, the behavior of the Sun.