ರಾಜಕೀಯ

CM Siddaramaia: ಫೆ 28ರೊಳಗೆ ಕನ್ನಡ ನಾಮಫಲಕ ಹಾಕ್ಬೇಕು, ಶೀಘ್ರವೇ ಸುಗ್ರೀವಾಜ್ಞೆ; ಸಿಎಂ ಸಿದ್ದು ವಾರ್ನಿಂಗ್

ಫೆಬ್ರವರಿ 28 ರೊಳಗೆ 60% ಕನ್ನಡ ಪದ ಬಳಕೆಯ ನಾಮ‌ಫಲಕ ಹಾಕದಿದ್ದರೆ ಕ್ರಮ ಕೈಗೊಳ್ಳಬೇಕು ಅಂತ ನಾವು ಈಗಾಗಲೇ ಬಿಬಿಎಂಪಿಗೆ ಹೇಳಿದ್ದೇವೆ. ಸರೋಜಿನಿ‌ ಮಹಿಷಿ ವರದಿ ಪ್ರಕಾರ ಕನ್ನಡ ಉಳಿವಿಗೆ ನಡೆದುಕೊಳ್ತೀವಿ ಎಂದು ಸಿಎಂ ತಿಳಿಸಿದ್ದಾರೆ.

ಸಿಎಂ ಹೇಳಿದ್ದೇನು?.

Tyler Perry

ಬೆಂಗಳೂರು: ಅಂಗಡಿ ಮುಗ್ಗಟ್ಟುಗಳ ಮುಂಭಾಗ ಕನ್ನಡ ನಾಮಫಲಕ (Kannada Name Board) ಅಳವಡಿಸುವ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ (Official Home Office Krishna) ನಡೆದ ಸಭೆಯಲ್ಲಿ ಗೃಹ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು (BBMP Officers) ಭಾಗಿಯಾಗಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, 24 ಮಾರ್ಚ್ 2018 ರಂದು 60% ಕನ್ನಡ ಇರಬೇಕೆಂದು ನಾವು ಸುತ್ತೋಲೆ ಹೊರಡಿಸಿದ್ವಿ. ಆದರೆ ಹಿಂದಿನ ಸರ್ಕಾರ 50-50 ಮಾಡಿ ಆದೇಶಿಸಿದೆ. ಆದರೆ ಇವತ್ತು ಹಿಂದಿನ ಸುತ್ತೋಲೆಯಂತೆ 60% -40% ಇರಬೇಕೆಂದು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸುಗ್ರೀವಾಜ್ಞೆ (Ordinance) ಮೂಲಕ ತಿದ್ದುಪಡಿ ತಂದು ಆದೇಶ ಹೊರಡಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ನಿನ್ನೆ ನಡೆದ ಘಟನೆ‌ ಸಂಬಂಧ‌ ಇವತ್ತು ಗೃಹ ಸಚಿವರು ನಾನು ಪೊಲೀಸ್ ಇಲಾಖೆ , ನಗರಪಾಲಿಕೆ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ಕರೆಯಲಾಗಿತ್ತು. ಡಿಕೆ ಶಿವಕುಮಾರ್ ನಾಗಪೂರ್ ಸಭೆಗೆ ಹೋದ ಕಾರಣ ಸಭೆಗೆ ಬಂದಿಲ್ಲ. 2023 ರ ಮಾರ್ಚ್ 10 ರಂದು ಹಿಂದಿನ ಸರ್ಕಾರ ಕನ್ನಡ ಭಾಷ ಸಮಗ್ರ ಅಭಿವೃದ್ದಿ ಅಧಿನಿಯಮ-2022 ಬಿಲ್ ತಂದಿದ್ದಾರೆ.

ಇದು ಎರಡೂ ಸದನಗಳಲ್ಲಿ ಪಾಸ್ ಆಗಿದೆ. ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕಿದ್ದಾರೆ. ಸೆಕ್ಷನ್ 17 ಸಬ್ ಸೆಕ್ಷನ್ 6 ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪದಾಧಿಕಾರಿಗಳ ಅನುಮೋಧನೆ ಅಥವಾ ಮಂಜೂರಾತಿಗೆ ಒಳಪಟ್ಟ ವ್ಯಾಪಾರ ವಹಿವಾಟು ಕೇಂದ್ರಗಳ‌ ನಾಮಫಲಕಗಳು 50% ಕನ್ನಡದಲ್ಲಿರಬೇಕೆಂದು ನಿಯಮ ರೂಪಿಸಲಾಗಿದೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ 50-50 ಮಾಡಿ ಆದೇಶಿಸಿದೆ

24 ಮಾರ್ಚ್ 2018 ರಂದು 60% ಕನ್ನಡ ಇರಬೇಕೆಂದು ನಾವು ಸುತ್ತೋಲೆ ಹೊರಡಿಸಿದ್ದೇವು. ಆದರೆ ಹಿಂದಿನ ಸರ್ಕಾರ 50-50 ಮಾಡಿ ಆದೇಶಿಸಿದೆ, ಆದರೆ ಇವತ್ತು ಹಿಂದಿನ ಸುತ್ತೋಲೆಯಂತೆ 60% -40% ಇರಬೇಕೆಂದು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಆದೇಶ ಹೊರಡಿಸಿ ಎಂದು ಹೇಳಿದ್ದೇನೆ. 2024 ಫೆಬ್ರವರಿ 28ರೊಳಗೆ ಕನ್ನಡ ಈ ಆದೇಶ ಜಾರಿಗೆ ಬರಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಕನ್ನಡಪರ ಸಂಘಟನೆಗಳಿಗೆ ಸಿಎಂ ಖಡಕ್ ಎಚ್ಚರಿಕೆ

ಆದರೆ, ಈ‌ ಆಕ್ಟ್ ಇನ್ನೂ ನೋಟಿಫೈ ಆಗಿಲ್ಲ. ತಕ್ಷಣ ನೋಟೀಫೈ ಮಾಡಿ ರೂಲ್ಸ್ ಫ್ರೇಮ್‌ ಮಾಡಲು ಹೇಳಿದ್ದೇನೆ. ವಿಳಂಬ ಆಗಿರೋದು ನಿಜ, ಆದರೆ ಇನ್ನು ವಿಳಂಬ ಆಗಬಾರದು ಅಂತ ಹೇಳಿದ್ದೇನೆ. ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ರೂಲ್ಸ್ ಫ್ರೇಮ್‌ ಮಾಡ್ತೀವಿ ಎಂದು ಸಿಎಂ ಘೋಷಿಸಿದರು. ಅಲ್ಲದೇ, ಶಾಂತಿಯುತ ಪ್ರತಿಭಟನೆಗೆ ನಮ್ಮ ಸರ್ಕಾರ ಅಡ್ಡಿಪಡಿಸಲ್ಲ. ಆದರೆ ಕಾನೂನು ವಿರುದ್ದವಾಗಿ ನಡೆದುಕೊಂಡರೆ ಸರ್ಕಾರ ಸಹಿಸಲ್ಲ ಎಂದು ಕನ್ನಡ ಪರ ಹೋರಾಟಗಾರರಿಗೆ ಎಚ್ಚರಿಕೆ ನೀಡಿದರು.

ಇತ್ತೀಚೆಗೆ 2022 ಮಾರ್ಚ್​​ 03 ರಂದು ಹೈಕೋರ್ಟ್ ದ್ವಿಸದಸ್ಯ ಪೀಠ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ತೀರ್ಪು ನೀಡಿದೆ. ಆದರೂ ನ್ಯಾಯಕ್ಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ , ರಾಜ್ಯಕ್ಕಾಗಿ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ ಎಂದರೆ ನಾವು ವಿರೋಧ ಮಾಡಲ್ಲ. ಆದರೆ ಕಾನೂನು, ನಿಯಮಗಳನ್ನು ಮುರಿಯೋದು, ಕಾನೂನು ಕೈ ತೆಗೆದುಕೊಂಡರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ಆದರೂ ಕಾನೂನು ರೀತಿ ನಡೆದುಕೊಳ್ಳಬೇಕು ಅಂತ ತಿಳಿಸಿದರು.

ಕನ್ನಡ ಉಳಿವಿಗೆ ನಡೆದುಕೊಳ್ತೀವಿ

ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ನೀಡಿದ್ದೇವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡ ಭಾಷೆಗೆ ಮೊದಲ ಆದ್ಯತೆ. ಇದರಲ್ಲಿ ಯಾವುದೇ ರಾಜೀ‌ ಇಲ್ಲ. ಪೊಲೀಸರು ಇರುವುದೇ ಕಾನೂನು ರೀತಿ ಕ್ರಮ ಕೈಗೊಳ್ಳಲು. ‘ವಿ ಆರ್ ಫಾರ್ ಕನ್ನಡ’ನಾನು‌ ಇವತ್ತಿಗೂ ಫೈಲ್ ಮೇಲೆ ಬರೆಯೋದೆಲ್ಲಾ ಕನ್ನಡದಲ್ಲೇ. ಕನ್ನಡ ಸಾರ್ವಭೌಮ‌ ಭಾಷೆ, ಕನ್ನಡದಲ್ಲಿ ಆಡಳಿತ ನಡೆಸಬೇಕು. ಫೆಬ್ರವರಿ 28 ರೊಳಗೆ 60% ಕನ್ನಡ ಪದ ಬಳಕೆಯ ನಾಮ‌ಫಲಕ ಹಾಕದಿದ್ದರೆ ಕ್ರಮ ಕೈಗೊಳ್ಳಬೇಕು ಅಂತ ನಾವು ಈಗಾಗಲೇ ಬಿಬಿಎಂಪಿಗೆ ಹೇಳಿದ್ದೇವೆ. ಸರೋಜಿನಿ‌ ಮಹಿಷಿ ವರದಿ ಪ್ರಕಾರ ಕನ್ನಡ ಉಳಿವಿಗೆ ನಡೆದುಕೊಳ್ತೀವಿ ಎಂದು ಭರವಸೆಯನ್ನು ನೀಡಿದರು.

Leave a Reply

Your email address will not be published. Required fields are marked *