ಟ್ರೆಂಡಿಂಗ್‌ಶಿಕ್ಷಣ

Swami Vivekananda Jayanti: ರಾಷ್ಟ್ರೀಯ ಯುವ ದಿನ : ಇಲ್ಲಿವೆ ಸ್ವಾಮಿ ವಿವೇಕಾನಂದರ ಸಂದೇಶಗಳು

ಇಂದು ರಾಷ್ಟ್ರೀಯ ಯುವ ದಿನ. ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಜನವರಿ 12 ಎಂಬುದು ಪ್ರತಿಯೊಬ್ಬರ ಪಾಲಿಗೂ ಮಹತ್ವದ ದಿನ. ಸಾರ್ಥಕ ಜೀವನವನ್ನು ನಡೆಸಲು ಬೇಕಾದ ಸ್ಫೂರ್ತಿಯನ್ನು ಈ ದಿನದಂದು ನಾವು ಪಡೆಯಬಹುದು.

ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಹಾಗೂ ಚಿಂತಕರಲ್ಲಿ ಒಬ್ಬರು. ತನ್ನ ತ್ವತ್ವ ಆದರ್ಶಗಳಿಂದಲೇ ಸ್ವಾಮಿ ವಿವೇಕಾನಂದರು ಎಲ್ಲರ ಗಮನ ಸೆಳೆದಿದ್ದಾರೆ. ಸ್ವಾಮಿ ವಿವೇಕಾನಂದರ ಮಾತುಗಳು, ಬೋಧನೆಗಳು ಇಂದಿಗೂ ಪ್ರಸ್ತುತ. ಇವರ ಚಿಂತನೆಗಳು, ಆದರ್ಶಗಳು ಯುವ ಜನರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ಇದೇ ಕಾರಣದಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತದೆ.

ಕೋಲ್ಕತ್ತಾದ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ದಂಪತಿ ಪುತ್ರನಾಗಿ 1863ರ ಜನವರಿ 12ರಂದು ಜನಿಸಿದ ವಿವೇಕಾನಂದರ ಮೊದಲ ಹೆಸರು ನರೇಂದ್ರನಾಥ ದತ್ತ. ಬಳಿಕ ಇವರು ವಿವೇಕಾನಂದ ಎಂಬ ಹೆಸರಿನಿಂದ ಜಗದ್ವಿಖ್ಯಾತಿಗಳಿಸಿದರು. ಗುರುಗಳಾದ ರಾಮಕೃಷ್ಣ ಪರಮಹಂಸರು ತೋರಿದ ಜ್ಞಾನದ ಬೆಳಕಿನಲ್ಲಿ ಬೆಳೆದ ವಿವೇಕಾನಂದರು, ಕಾಲ್ನಡಿಯಲ್ಲೇ ದೇಶದ ಮೂಲೆ ಮೂಲೆ ಸಂಚರಿಸಿ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದರು. 1893ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ವಿಖ್ಯಾತಿ. ರಾಷ್ಟ್ರಪ್ರೇಮ, ಭಾರತೀಯ ಸಂಸ್ಕೃತಿಯ ಆಳವಾದ ಜ್ಞಾನ ಹೊಂದಿದ್ದ ವಿವೇಕಾನಂದರು ಇಂದಿಗೂ ಎಂದೆಂದಿಗೂ ಎಲ್ಲರಿಗೂ ಸ್ಫೂರ್ತಿ.

ಸ್ವಾಮಿ ವಿವೇಕಾನಂದ ಜಯಂತಿಯ ಶುಭಾಶಯಗಳು

  • ಸ್ವಾಮಿ ವಿವೇಕಾನಂದ ಜಯಂತಿ ಈ ಸಂದರ್ಭದಲ್ಲಿ ಸವಾಲುಗಳನ್ನು ಜಯಿಸುವ ಮತ್ತು ಜೀವನದ ಉದ್ದೇಶಗಳನ್ನು ಸಾರ್ಥಕಗೊಳಿಸುವ ಶಕ್ತಿ ನಿಮ್ಮದಾಗಲಿ. ನಿಮಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು
  • ಈ ಶುಭ ಕ್ಷಣ ಸ್ವಯಂ-ಅನ್ವೇಷಣೆ, ಸುಜ್ಞಾನ ಮತ್ತು ನಿಮ್ಮ ಕನಸುಗಳತ್ತ ಹೆಜ್ಜೆ ಇಡಲು ಬೇಕಾದ ಧೈರ್ಯ ತುಂಬುವ ದಿನವಾಗಿರಲಿ ಎಂದು ಹಾರೈಸುತ್ತೇನೆ. ನಿಮಗೆ ಸ್ವಾಮಿ ವಿವೇಕಾನಂದ ಜಯಂತಿಯ ಶುಭಾಶಯಗಳು
  • ಸ್ವಾಮಿ ವಿವೇಕಾನಂದರ ನಿರ್ಭಯತೆ ಮತ್ತು ಸಹಾನುಭೂತಿಯ ಆದರ್ಶಗಳು ಗುರಿ ಮತ್ತು ಸಾರ್ಥಕತೆಯ ಜೀವನದ ಕಡೆಗೆ ನಿಮ್ಮನ್ನು ಕರೆದೊಯ್ಯುವ ದಾರಿದೀಪವಾಗಿರಲಿ. ತಮಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು
  • ಸಮಾಜಕ್ಕೆ ಧನಾತ್ಮಕ ಕೊಡುಗೆಯನ್ನು ನೀಡಲು ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಎಲ್ಲರಿಗೂ ಸ್ಫೂರ್ತಿ ತುಂಬಲಿ. ಸರ್ವರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು
  • ಈ ಶುಭದಾಯಕ ದಿನದಂದು ಸ್ವಾಮಿ ವಿವೇಕಾನಂದರ ಬೋಧನೆಗಳು ಶ್ರೇಷ್ಠತೆಗಾಗಿ ಶ್ರಮಿಸಲು ಹಾಗೂ ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರಲು ನಿಮ್ಮನ್ನು ಪ್ರೇರೇಪಿಸಲಿ. ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು
  • ಸ್ವಾಮಿ ವಿವೇಕಾನಂದರ ಸಂದೇಶಗಳು
  • ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ
  • ಹೃದಯ ಹಾಗೂ ಮೆದುಳಿನ ನಡುವಿನ ಸಂಘರ್ಷದಲ್ಲಿ, ನೀವು ನಿಮ್ಮ ಹೃದಯವನ್ನು ಅನುಸರಿಸಿ
  • ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳಿ. ಇಲ್ಲದಿದ್ದರೆ ಒಗತ್ತಿನಲ್ಲಿ ಒಬ್ಬ ಅದ್ಭುತ ವ್ಯಕ್ತಿಯನ್ನು ನೀವು ಕಳೆದುಕೊಳ್ಳುತ್ತೀರಿ.
  • ನಿಮ್ಮನ್ನು ನೀವು ನಂಬುವವರೆಗೂ ನಿಮಗೆ ದೇವರ ಮೇಲೆ ನಂಬಿಕೆ ಬಾರದು
  • ನಾವು ಏನಾಗಿದ್ದೇವೋ ಅದು ನಮ್ಮ ವಿಚಾರಗಳಿಂದಲೇ. ಹೀಗಾಗಿ, ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ ಗಮನ ಇರಲಿ
  • ಯಾರೂ ನಿಮಗೆ ಕಲಿಸಲಾರರು, ಯಾರೂ ನಿಮ್ಮನ್ನು ಆಧ್ಮಾತ್ಮಿಕ ವ್ಯಕ್ತಿಗಳನ್ನಾಗಿ ಮಾಡಲಾರರು. ನಿಮಗೆ ನೀವೇ ಗುರುಗಳು. ನಿಮ್ಮ ಆತ್ಮ ಹೊರತುಪಡಿಸಿ ಬೇರೆ ಯಾವ ಗುರುವೂ ಇಲ್ಲ.
  • ನಿಮ್ಮ ದೇಶಕ್ಕೆ ನಾಯಕರು ಬೇಕು. ನೀವು ಯಾವಾಗಲೂ ನಾಯಕರಾಗಿರಿ. ಕೆಲಸ ಮಾಡುವುದೇ ನಿಮ್ಮ ಕರ್ತವ್ಯ. ಆಗ ಪ್ರತಿಯೊಂದೂ ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ.
  • ಒಂದು ಉದ್ದೇಶದ ಬಗ್ಗೆ ಯೋಚಿಸಿ. ಆ ಉದ್ದೇಶವನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ. ಅದರ ಬಗ್ಗೆ ಯೋಚಿಸಿ, ಅದರ ಬಗ್ಗೆ ಕನಸು ಕಾಣಿರಿ, ಅದೇ ಉದ್ದೇಶದ ಮೇಲೆ ಬದುಕಿ, ನಿಮ್ಮ ಮೆದುಳು, ಸ್ನಾಯುಗಳು, ನರ ನರಗಳು, ದೇಹದ ಪ್ರತಿಯೊಂದು ಭಾಗದಲ್ಲೂ ಅದೇ ಉದ್ದೇಶ ತುಂಬಿರಲಿ ಮತ್ತು ಉಳಿದೆಲ್ಲಾ ವಿಚಾರಗಳನ್ನು ಬಿಟ್ಟುಬಿಡಿ. ಇದು ಯಶಸ್ಸಿನ ದಾರಿ.
  • ಏಕಾಗ್ರತೆಯ ಶಕ್ತಿಯು ಜ್ಞಾನದ ನಿಧಿಯನ್ನು ತಲುಪುವ ಏಕೈಕ ಕೀಲಿ ಕೈಯಾಗಿದೆ.
  • ನಾವು ಎಷ್ಟು ಹೆಚ್ಚು ಹೊರಬಂದು ಇತರರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ, ಅಷ್ಟು ನಮ್ಮ ಹೃದಯ ಶುದ್ಧವಾಗುತ್ತವೆ ಮತ್ತು ಅಂಥವರಲ್ಲಿ ದೇವರು ಇರುತ್ತಾನೆ
  • ನಿಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಿ. ನೀವು ಗೆದ್ದರೆ ನೀವು ಮುನ್ನಡೆಯಬಹುದು, ಒಂದೊಮ್ಮೆ ನೀವು ಸೋತರೆ ಮಾರ್ಗದರ್ಶನ ಮಾಡಬಹುದು

Leave a Reply

Your email address will not be published. Required fields are marked *