ಹುಬ್ಬಳ್ಳಿ: ತಾಲೂಕಿನ ತಾರಿಹಾಳ ಗ್ರಾಮದಲ್ಲಿರುವ ಇಂಡಸ್ಟ್ರಿಯಲ್ ಗ್ಯಾರೇಜ್ ಗಳಲ್ಲಿ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕರಿಯಪ್ಪ ಚಿನ್ನಪ್ಪ ತಳವಾರ, ಸುನೀಲ್ ಜಂಬಣ್ಣ ಕಟ್ಟಿಮನಿ, ಸಂಗಮೇಶ ಕರಿಗೌಡ ಬಬಲೇಶ್ವರ ಎಂಬುವರೇ ಕಳ್ಳತನ ಮಾಡಿದ್ದು, ಹುಬ್ಬಳ್ಳಿ ಹಾಗೂ ಉಣಕಲ್ ನ ನಿವಾಸಿಗಳೆಂದು ತಿಳಿದುಬಂದಿದ್ದು, 439000 ಮೌಲ್ಯದ ಕಳ್ಳತನವಾದ ಕಬ್ಬಿಣದ ವಸ್ತುಗಳು ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ, ನೇತೃತ್ವದಲ್ಲಿ ಪಿಎಸ್ಐ ವಿ.ಎಸ್.ಬೆಳಗಾಂವಕರ, ಸಚಿನ ಬೆಳಗಾಂವಕರ ಹಾಗೂ ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.