ಇಂಡಿಯನ್ ಸೂಪರ್ ಲೀಗ್ಕ್ರಿಕೆಟ್

WTC Points Table: ಇಂಗ್ಲೆಂಡ್‌ ವಿರುದ್ಧ ಗೆದ್ದ ಬೆನ್ನಲ್ಲೆ 2ನೇ ಸ್ಥಾನಕ್ಕೇರಿದ ಭಾರತ!

ಹೈಲೈಟ್ಸ್‌:

  • ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದೆ.
  • ವಿಶಾಖಪಟ್ಟಣಂ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 106 ರನ್‌ಗಳಿಂದ ಗೆಲುವು ಪಡೆದಿದೆ.
  • ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ವಿಶಾಖಪಟ್ಟಣಂ: ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 106 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆ ಮೂಲಕ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕುವ ಸನಿಹದಲ್ಲಿದೆ.

ಈ ಹಿಂದೆ ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿನ ಬ್ಯಾಟಿಂಗ್‌ ವೈಫಲ್ಯದಿಂದ 28 ರನ್‌ಗಳಿಂದ ಸೋಲು ಅನುಭವಿಸಿತ್ತು. ಇದರ ಪರಿಣಾಮ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಎರಡನೇ ಟೆಸ್ಟ್‌ ಗೆಲ್ಲುವ ಮೂಲಕ ಟೀಮ್‌ ಇಂಡಿಯಾ ಅಂಕಪಟ್ಟಿಯಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದೆ.

ವೈಝಾಗ್ ಟೆಸ್ಟ್‌ನ ಸ್ಕೋರ್‌ ಕಾರ್ಡ್‌
ಇದೀಗ ವಿಶಾಖಪಟ್ಟಣಂ ಟೆಸ್ಟ್ ಗೆಲುವಿನ ಮೂಲಕ ಭಾರತ ತಂಡ 52.77ರ ಗೆಲುವಿನ ಸರಾಸರಿ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಐದು ಸ್ಥಾನಗಳಲ್ಲಿರುವ ತಂಡಗಳ ನಡುವಣ ಗೆಲುವಿ ಸರಾಸರಿಯಲ್ಲಿ ಕೇವಲ 5 ರಷ್ಟು ಮಾತ್ರ ವ್ಯತ್ಯಾಸವನ್ನು ಹೊಂದಿವೆ. ಮುಂದಿನ ಟೆಸ್ಟ್‌ ಪಂದ್ಯಗಳ ಫಲಿತಾಂಶದಿಂದ ಅಗ್ರ ಐದರಲ್ಲಿ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸಬಹುದು.

ಸೋಮವಾರ ವಿಶಾಖಪಟ್ಟಣಂನಲ್ಲಿ ಮುಗಿದಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಆರ್‌ ಅಶ್ವಿನ್‌ ಅವರ ತಲಾ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತ ತಂಡದ 106 ರನ್‌ಗಳ ಗೆಲುವಿನ ಮಹತ್ತರ ಪಾತ್ರವಹಿಸಿದ್ದರು. 399 ರನ್‌ಗಳ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ತಂಡ 95 ರನ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ ಉತ್ತಮ ಆರಂಭ ಪಡೆದಿತ್ತು. ಆದರೆ, ಸೋಮವಾರ ಬೆಳಗಿನ ಸೆಷನ್‌ನಲ್ಲಿ ಪಂದ್ಯದ ದಿಕ್ಕು ಭಾರತದ ಪರ ತಿರುಗಿತು.

ಝ್ಯಾಕ್‌ ಕ್ರಾವ್ಲಿ 73 ರನ್

ಇಂಗ್ಲೆಂಡ್‌ ಓಪನರ್‌ ಝ್ಯಾಕ್‌ ಕ್ರಾವ್ಲಿ ಅವರು 73 ರನ್‌ ಗಳಿಸಿ ಉತ್ತಮ ಪ್ರತಿರೋಧ ತೋರಿದ್ದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಬೆನ್‌ ಫೋಕ್ಸ್ ಮತ್ತು ಟಾಮ್‌ ಹಾರ್ಟ್ಲೀ ಅವರು ತಲಾ 36 ರನ್‌ ಗಳಿಸಿದರೂ ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಇಂಗ್ಲೆಂಡ್‌ ತಂಡ 292 ರನ್‌ಗಳಿಗೆ ಆಲ್‌ಔಟ್‌ ಆಗಬೇಕಾಯಿತು. ಆ ಮೂಲಕ 106 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

ನೈಟ್‌ ವಾಚ್‌ಮ್ಯಾನ್‌ ಆಗಿ ಬಂದಿದ್ದ ರೆಹಾನ್‌ ಅಹ್ಮದ್‌ ಅವರನ್ನು ಸೋಮವಾರ ಬೆಳಿಗ್ಗೆ ಅಕ್ಷರ್‌ ಪಟೇಲ್ ಅವರು ಔಟ್‌ ಮಾಡಿದರು. ನಂತರ ಆರ್‌ ಅಶ್ವಿನ ಅವರು ಓಲ್ಲೀ ಪೋಪ್ ಮತ್ತು ಜೋ ರೂಟ್‌ ಅವರನ್ನು ಔಟ್‌ ಮಾಡಿದ್ದರು. ಪೋಪ್‌ 23 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಬ್ಯಾಕ್‌ವಾರ್ಡ್ ಪಾಯಿಂಟ್‌ನಲ್ಲಿ ಅಕ್ಷರ್ ಪಟೇಲ್‌ಗೆ ಕ್ಯಾಚಿತ್ತರು.

ಆಸ್ಟ್ರೇಲಿಯಾ ತಂಡಕ್ಕೆ ಅಗ್ರ ಸ್ಥಾನ

ಪ್ರಸಕ್ತ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಿಂದ ಆಸ್ಟ್ರೇಲಿಯಾ ತಂಡ 6 ಗೆಲುವು ಪಡೆದಿದೆ. ಆ ಮೂಲಕ 55ರ ಗೆಲುವಿನ ಸರಾಸರಿ ಮೂಲಕ ಹಾಲಿ ಚಾಂಪಿಯನ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಭಾರತ ತಂಡದ 52.77ರ ಗೆಲುವಿನ ಸರಾಸರಿಯಲ್ಲಿಎರಡನೇ ಸ್ಥಾನವನ್ನು ಅಲಂಕರಿಸಿದೆ. 50ರ ಗೆಲುವಿನ ಸರಾಸರಿ ಹೊಂದಿರುವ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳನ್ನು ಅಲಂಕರಿಸಿವೆ.

Shares:

Related Posts

Leave a Reply

Your email address will not be published. Required fields are marked *