Congressಕರ್ನಾಟಕ

“Mysore Lok Sabha Constituency : ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅಭ್ಯರ್ಥಿ, ಸಿಎಂ ತವರೂರಿನಲ್ಲಿ ಕಾಂಗ್ರೆಸ್ ಭಾವನಾತ್ಮಕ ಅಸ್ತ್ರ !”

DK Shivakumar Reaction On Mysore Lok Sabha Election : ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್ ಅಭ್ಯರ್ಥಿ ಅಲ್ಲ, ಬದಲಿಗೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮಾತನ್ನು ಡಿಕೆಶಿ ಪದೇಪದೇ ಹೇಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೈಲೈಟ್ಸ್‌:

  • ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ್
  • ಬಿಜೆಪಿಯಿಂದ ಮಹಾರಾಜ ಯದುವೀರ್ ಒಡೆಯರ್ ಅವರಿಗೆ ಟಿಕೆಟ್, ಬಿಜೆಪಿ ಫುಲ್ ಸ್ವಿಂಗ್ ನಲ್ಲಿ ಪ್ರಚಾರ
  • ನಾನು ಮತ್ತು ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್

ಮೈಸೂರು : ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಲಾರಂಭಿಸಿದೆ, ಚುನಾವಣೆ ವೇಳೆಯ ಮಾಮೂಲಿ ರಾಜಕೀಯ ವಿದ್ಯಮಾನದಂತೆ, ಅನ್ಯ ಪಕ್ಷಗಳ ವಿವಿಧ ಮುಖಂಡರುಗಳು/ ಕಾರ್ಯಕರ್ತರು ಬೇರೊಂದು ಪಕ್ಷಕ್ಕೆ ತಮ್ಮ ನಿಯತ್ತನ್ನು ಬದಲಿಸುತ್ತಿದ್ದಾರೆ. ಅದರ ಭಾಗವಾಗಿ, ಬೇರೆ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದಾರೆ.

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಕಣದಲ್ಲಿರಲಿದ್ದಾರೆ. ಇನ್ನು, ಬಹುಜನ ಸಮಾಜ ಪಕ್ಷದಿಂದ ಚಂದ್ರಶೇಖರ ಪಿ. ಅವರು ಹುರಿಯಾಳು ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಶೇ. 1.87 ಮತವನ್ನು ಪಡೆದಿತ್ತು.

Shares:

Related Posts

Leave a Reply

Your email address will not be published. Required fields are marked *