ತಂತ್ರಜ್ಞಾನ

“ದೇಶದಲ್ಲಿ ಬ್ಯಾಂಕ್‌ ವಂಚನೆ ಪ್ರಕರಣಗಳು 3 ಪಟ್ಟು ಏರಿಕೆ, ಖಾಸಗಿ ಬ್ಯಾಂಕ್‌ಗಳಲ್ಲೇ ಹೆಚ್ಚಿನ ವಂಚನೆ!”

ದೇಶದಲ್ಲಿ ಈ ವರ್ಷ ಬ್ಯಾಂಕ್‌ ವಂಚನೆ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ವರದಿ ಹೇಳಿದೆ. ಬ್ಯಾಂಕ್‌ ವಂಚನೆಗೆ ಖಾಸಗಿ ಬ್ಯಾಂಕ್‌ಗಳು ಹೆಚ್ಚು ಬಲಿಯಾಗುತ್ತಿವೆ ಎಂದು ವರದಿ ಹೇಳಿದ್ದು, ಇದರ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 14,483 ವಂಚನೆ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ.

ಹೈಲೈಟ್ಸ್‌:

  • ದೇಶದಲ್ಲಿ ಈ ವರ್ಷ ಬ್ಯಾಂಕ್‌ ವಂಚನೆ ಪ್ರಕರಣಗಳು ಮೂರು ಪಟ್ಟು ಹೆಚ್ಚಳ
  • ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗ
  • ಬ್ಯಾಂಕ್‌ ವಂಚನೆಗೆ ಖಾಸಗಿ ಬ್ಯಾಂಕ್‌ಗಳು ಹೆಚ್ಚು ಬಲಿಯಾಗುತ್ತಿವೆ ಎಂದ ವರದಿ
  • ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 14,483 ವಂಚನೆ ಪ್ರಕರಣಗಳು ವರದಿ

ಮುಂಬಯಿ: ದೇಶದಲ್ಲಿ ಬ್ಯಾಂಕ್‌ ವಂಚನೆ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿವೆ. ಬ್ಯಾಂಕ್‌ ವಂಚನೆಗೆ ಖಾಸಗಿ ಬ್ಯಾಂಕ್‌ಗಳು ಹೆಚ್ಚು ಬಲಿಯಾಗುತ್ತಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 14,483 ವಂಚನೆ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ.

ಆದರೆ, ವಂಚನೆ ಪ್ರಕರಣಗಳು ಹೆಚ್ಚಿದ್ದರೂ ವಂಚನೆಯ ಮೊತ್ತದ ಪ್ರಮಾಣ ಮಾತ್ರ ಕಡಿಮೆಯಾಗಿದೆ. ಬ್ಯಾಂಕ್‌ ವಂಚನೆ ಪ್ರಕರಣಗಳ ಸಂಖ್ಯೆ ಏರಿದ್ದರೂ, ಈ ವಂಚನೆಗಳಲ್ಲಿನ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಶೇ. 14.9ರಷ್ಟಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ಹೇಳಿದೆ.

“ಸೈಬರ್‌ ವಂಚನೆ ಮತ್ತು ಡೇಟಾ ಉಲ್ಲಂಘನೆಯ ಅಪಾಯಗಳಿಂದ ಬ್ಯಾಂಕಿಂಗ್‌ ಮತ್ತು ಪಾವತಿ ವ್ಯವಸ್ಥೆಯನ್ನು ರಕ್ಷಿಸುವುದು ಬಹಳ ಮುಖ್ಯ,” ಎಂದು ರಿಸರ್ವ್‌ ಬ್ಯಾಂಕ್‌ ವರದಿಯಲ್ಲಿ ಹೇಳಲಾಗಿದೆ.

 ಏಪ್ರಿಲ್‌ – ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟು 2,642 ಕೋಟಿ ರೂ. ಮೌಲ್ಯದ 14,483 ವಂಚನೆ ಪ್ರಕರಣಗಳು ವರದಿಯಾಗಿವೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 5,396 ವಂಚನೆ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ oqfqu 17,685 ಕೋಟಿ ರೂ. ವಂಚಕರ ಪಾಲಾಗಿತ್ತು.

ಇಂಟರ್ನೆಟ್‌ ವಂಚನೆ ಪ್ರಕರಣಗಳು ಹೆಚ್ಚು

ಕಳೆದ ಹಣಕಾಸು ವರ್ಷದಲ್ಲಿ ಡೆಬಿಟ್‌ ಮತ್ತು ಕ್ರೆಡಿಡ್‌ ಕಾರ್ಡ್‌ ಹಾಗೂ ಇಂಟರ್ನೆಟ್‌ ವಂಚನೆಗಳು ಹೆಚ್ಚಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ಹೇಳುತ್ತಿದೆ. ಹೊಸ ತಂತ್ರಜ್ಞಾನದ ಆಗಮನದೊಂದಿಗೆ, ಸೈಬರ್‌ ದಾಳಿ, ಡೇಟಾ ಟ್ಯಾಂಪರಿಂಗ್‌ ಮತ್ತು ವ್ಯವಹಾರದ ಅಡಚಣೆಯ ಅಪಾಯವೂ ಹೆಚ್ಚಾಗಿದೆ.

ಆರ್ಟಿಫೀಷಿಯಲ್ ಇಂಟಲಿಜೆನ್ಸ್‌ ಬಳಕೆ ಹೆಚ್ಚಿಸಿ ವಂಚನೆ ತಡೆಗೆ ಯತ್ನ

ಬ್ಯಾಂಕ್‌ಗಳು ಕೃತಕ ಬುದ್ಧಿಮತ್ತೆಯ (ಎಐ) ಲಾಭವನ್ನೂ ಪಡೆಯುತ್ತಿವೆ. ಗ್ರಾಹಕರ ಅನುಭವವನ್ನು ಸುಧಾರಿಸಲು ಬ್ಯಾಂಕ್‌ಗಳು ಚಾಟ್‌ಬಾಟ್‌ಗಳು ಅಥವಾ ‘ವರ್ಚುವಲ್‌ ಅಸಿಸ್ಟೆಂಟ್‌ಗಳನ್ನು’ ನಿಯೋಜಿಸಿವೆ. ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌ ಬಳಕೆ ಹೆಚ್ಚಿಸಿ ವಂಚನೆ ತಡೆಗೆ ಬ್ಯಾಂಕ್‌ಗಳು ಮುಂದಾಗಿವೆ.

ಅಪರಿಚಿತ ವ್ಯಕ್ತಿಗಳು ತಮ್ಮ ಬ್ಯಾಂಕ್‌ನ ಉಳಿತಾಯ ಖಾತೆಯಿಂದ 2.31 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾರೆ ಎಂದು ಶಾಂತಿಗ್ರಾಮ ಹೋಬಳಿ ತಮ್ಲಾಪುರದ ಅಣ್ಣೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. “ನ.30 ರಿಂದ ಡಿ.24 ನಡುವೆ ನನ್ನ ಗಮನಕ್ಕೆ ಬಾರದಂತೆ ಬ್ಯಾಂಕ್‌ ಖಾತೆಯಿಂದ ಹಲವಾರು ಬಾರಿ ಸೇರಿ ಒಟ್ಟು 2,31,525 ರೂಪಾಯಿ ಹಣ ಡ್ರಾ ಮಾಡಲಾಗಿದೆ. ಆದರೆ ಇದು ನನ್ನ ಗಮನಕ್ಕೆ ಬಂದಿಲ್ಲ. ಆದರೆ ಡಿ.24 ರಂದು ನನ್ನ ಮೊಬೈಲ್‌ ನಂಬರ್‌ಗೆ 5,000 ರೂಪಾಯಿ ಹಣ ಡ್ರಾ ಆಗಿರುವ ಬಗ್ಗೆ ಮೆಸೇಜ್‌ ಬಂದಿದೆ. ಕೂಡಲೇ ಬ್ಯಾಂಕ್‌ ಶಾಖೆಗೆ ಹೋಗಿ ಪಾಸ್‌ ಬುಕ್‌ ಎಂಟ್ರಿ ಮಾಡಿಸಿ ನೋಡಿದಾಗ ಅಪರಿಚಿತರು ಸುಮಾರು 41 ಬಾರಿ ಒಟ್ಟು 2,31,525 ರೂಪಾಯಿ ಹಣವನ್ನು ಖಾತೆಯಿಂದ ಡ್ರಾ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ನನ್ನ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿದ್ದು, ಅವರನ್ನು ಪತ್ತೆ ಮಾಡಿ, ಕ್ರಮಕೈಗೊಳ್ಳಬೇಕು ಎಂದು ಅಣ್ಣೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ನಗರದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shares:

Related Posts

Leave a Reply

Your email address will not be published. Required fields are marked *