ಕರ್ನಾಟಕಕ್ರಿಮಿನಲ್

Son Murder: ಉಸಿರುಗಟ್ಟಿಸಿ ಕೊಂದಿರೋದು ಖಚಿತ; ತಂದೆಗೆ ಮಗುವಿನ ಶವ ಹಸ್ತಾಂತರ

ಬೆಂಗಳೂರು: ಗೋವಾದಲ್ಲಿ ತಾಯಿಯಿಂದಲೇ ಮಗುವಿನ (Son Murder) ಹತ್ಯೆ ಪ್ರಕರಣದ ತನಿಖೆ ಚುರುಕಗೊಂಡಿದೆ. ಮಂಗಳವಾರ ಚಿತ್ರದುರ್ಗದ (Chitradurga) ಹಿರಿಯೂರು ತಾಲೂಕಿನ ಆಸ್ಪತ್ರೆ ಶವಾಗರದಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮಧ್ಯರಾತ್ರಿ ಬೆಂಗಳೂರಿಗೆ ಮೃತದೇಹವನ್ನ ತರಲಾಗಿದೆ. ಯಶವಂತಪುರ (Yeshwanthpur) ಬಳಿಯ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯಲ್ಲಿರುವ ತಂದೆ ನಿವಾಸಕ್ಕೆ ಮಗುವಿನ ಮೃತದೇಹ ತರಲಾಗಿದೆ. ಇಂದು ಮಧ್ಯಾಹ್ನದವರೆಗೆ ಕುಟುಂಬಸ್ಥರಿಂದ ಮಗುವಿನ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ನಂತರ ಹರಿಶ್ಚಂದ್ರ ಘಾಟ್‌ನಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಇನ್ನು ಕೊಲೆ ಪ್ರಕರಣದ ಬಗ್ಗೆ ಗೋವಾ ಪೊಲೀಸರು (Goa Police) ತನಿಖೆ ನಡೆಸ್ತಿದ್ದು, ಗಂಡ-ಪತಿಯ ಸಂಬಂಧದ ಬಗ್ಗೆ ವಿಚಾರಣೆ ಮಾಡ್ತಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ಸುಚನಾ ಸೇಠ್‌ ಕಚೇರಿಗೂ ಬಂದು ಗೋವಾ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.  ಮರಣೋತ್ತರ ಪರೀಕ್ಷೆ ಬಳಿಕ ಮಗನ ಮೃತದೇಹ ಕಂಡು ತಂದೆ ವೆಂಕಟರಮಣ ಕಣ್ಣಿರಿಟ್ಟಿದ್ದಾರೆ.

ಮಗುವಿನ ಅಂತ್ಯಸಂಸ್ಕಾರದ ಬಳಿಕ ತಂದೆ ವೆಂಕಟರಮಣ ಅವರನ್ನು ವಿಚರಾಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

ಉಸಿರುಗಟ್ಟಿಸಿ ಕೊಲೆ

ಇನ್ನು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯ ಡಾ.ರಂಗೇಗೌಡ ಹಾಗೂ ಡಾ.ಕುಮಾರ್ ನಾಯ್ಕ್ ಅವರ ತಂಡ ಪ್ರತಿಕ್ರಿಯೆ ನೀಡಿದ್ದು, ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿರಬಹುದು ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರಬಹುದು. ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತಿಲ್ಲ, 36 ಗಂಟೆ ಹಿಂದೆ ಕೊಲೆ ಮಾಡಿರಬಹುದು ಎಂದಿದ್ದಾರೆ.

ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಸುಚನಾ

ಪತಿಯೊಂದಿಗೆ ದೂರವಾಗಲು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದ ಸುಚನಾ, ನೆಮ್ಮದಿ ಅರಸಿ ಜನವರಿ 6ರಂದು ನಾಲ್ಕು ವರ್ಷದ ಮಗನ ಜೊತೆ ಗೋವಾಗೆ ತೆರಳಿದ್ದಳು. ಗೋವಾದ ಹೋಟೆಲ್​ ನಲ್ಲಿ ಉಳಿದುಕೊಂಡಿದ್ದ ಸುಚನಾ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಸುಚನಾ ಪ್ರಯತ್ನಿಸಿದ್ದಳು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿಕೊಂಡ ಸುಚನಾ, ಕಾರ್ ಬುಕ್ ಮಾಡಿಕೊಂಡು ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರಿನತ್ತ ಹೊರಟಿದ್ದಳು.

Shares:

Related Posts

Leave a Reply

Your email address will not be published. Required fields are marked *