Techಉದ್ಯೋಗ

ತೆರಿಗೆ ವಂಚನೆ: ಐಟಿ ದಿಗ್ಗಜ ಇನ್ಫೋಸಿಸ್‌ಗೆ ಅಮೆರಿಕ ತೆರಿಗೆ ಪ್ರಾಧಿಕಾರದಿಂದ 225 ಡಾಲರ್ ದಂಡ!

ಹೈಲೈಟ್ಸ್‌:

  • ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತೆರಿಗೆ ವಂಚನೆ ಆರೋಪದಲ್ಲಿ ಸಿಕ್ಕಿ ಬಿದ್ದಿದೆ
  • ಉದ್ಯಮ ತೆರಿಗೆಯನ್ನು ನಿಗದಿತ ಮೊತ್ತಕ್ಕಿಂತ ಕಡಿಮೆ ಪಾವತಿ ಮಾಡಿರುವ ಆರೋಪ
  • ಅಮೆರಿಕದ ತೆರಿಗೆ ಪ್ರಾಧಿಕಾರದಿಂದ ಇನ್ಫೋಸಿಸ್ ಸಂಸ್ಥೆಗೆ 222 ಅಮೆರಿಕನ್ ಡಾಲರ್ ದಂಡ
  • ಬೆಂಗಳೂರು: ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತೆರಿಗೆ ವಂಚನೆ ಆರೋಪದಲ್ಲಿ ಸಿಕ್ಕಿ ಬಿದ್ದಿದೆ. ಉದ್ಯಮ ತೆರಿಗೆಯನ್ನು ನಿಗದಿತ ಮೊತ್ತಕ್ಕಿಂತ ಕಡಿಮೆ ಪಾವತಿ ಮಾಡಿರುವ ಆರೋಪ ಇನ್ಫೋಸಿಸ್ ವಿರುದ್ಧ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ತೆರಿಗೆ ಪ್ರಾಧಿಕಾರವು ಇನ್ಫೋಸಿಸ್ ಸಂಸ್ಥೆಗೆ 222 ಅಮೆರಿಕನ್ ಡಾಲರ್ ದಂಡ ವಿಧಿಸಿದೆ.
  • ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಹೇಳೋದಾದರೆ ಇನ್ಫೋಸಿಸ್ ಸಂಸ್ಥೆಯು 18,702 ರೂಪಾಯಿ ದಂಡ ಪಾವತಿ ಮಾಡಬೇಕಿದೆ. ಇನ್ಫೋಸಿಸ್ ಸಂಸ್ಥೆಯ ಒಟ್ಟಾರೆ ವಹಿವಾಟಿನ ಗಾತ್ರಕ್ಕೆ ಹೋಲಿಸಿದರೆ ಈ ಮೊತ್ತ ಅತಿ ಸಣ್ಣದಾದರೂ ಕೂಡಾ ತೆರಿಗೆ ಪಾವತಿ ವಿಚಾರದಲ್ಲಿ ಅಕ್ರಮ ಎಸಗಿದ ಗುರುತರ ಆಪಾದನೆ ಬೆಂಗಳೂರು ಮೂಲದ ಈ ಪ್ರತಿಷ್ಠಿತ ಸಂಸ್ಥೆಯ ಹೆಗಲೇರಿದಂತಾಗಿದೆ.
  • ಕಂಪನಿಗಳು ನೌಕರರಿಗೆ ಹೆಚ್ಚುವರಿ ಗಂಟೆ ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ: ಪ್ರಿಯಾಂಕ್‌ ಖರ್ಗೆ
  • ಏನಿದು ಶಾರ್ಟ್‌ ಪೇಮೆಂಟ್?
  • ಇನ್ಫೋಸಿಸ್ ಸಂಸ್ಥೆಯು ಅಮೆರಿಕದಲ್ಲಿ ತನ್ನ ವಹಿವಾಟು ನಡೆಸುವ ಹಿನ್ನೆಲೆಯಲ್ಲಿ ಉದ್ಯಮ ತೆರಿಗೆ ಪಾವತಿ ಮಾಡಬೇಕು. ಆದರೆ ತೆರಿಗೆ ಪಾವತಿ ಮಾಡುವ ವೇಳೆ ಇನ್‌ವಾಯ್ಸ್‌ನಲ್ಲಿ ನಮೂದಾಗಿದ್ದ ಮೊತ್ತಕ್ಕಿಂತಾ ಕಡಿಮೆ ಹಣವನ್ನು ಇನ್ಫೋಸಿಸ್ ಪಾವತಿ ಮಾಡಿದೆ. ಇದನ್ನು ಶಾರ್ಟ್‌ ಪೇಮೆಂಟ್ ಎನ್ನಲಾಗುತ್ತದೆ. ಇನ್ಫೋಸಿಸ್ ವಿರುದ್ಧದ ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಡ ವಿಧಿಸಿರುವುದಾಗಿ ಅಮೆರಿಕದ ತೆರಿಗೆ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ನೆವಾಡಾ ತೆರಿಗೆ ವಿಭಾಗದಿಂದ ಈ ದಂಡದ ನೋಟಿಸ್ ನೀಡಲಾಗಿದೆ.

ನಾರಾಯಣ ಮೂರ್ತಿ ಅವರು ಸಹ ಸಂಸ್ಥಾಪಕ ಆಗಿರುವ ಇನ್ಫೋಸಿಸ್ ಸಂಸ್ಥೆಯ ಒಟ್ಟು ಮಾರುಕಟ್ಟೆ ಮೌಲ್ಯ 6,84,000 ಕೋಟಿ ರೂ. ಭಾರತೀಯ ಕಂಪನಿಯಾದರೂ ಕೂಡಾ ಇನ್ಫೋಸಿಸ್ ಅಮೆರಿಕ ಸೇರಿದಂತೆ ವಿಶ್ವದ ಒಟ್ಟು 56 ದೇಶಗಳಲ್ಲಿ ತನ್ನ ವ್ಯವಹಾರ ಹೊಂದಿದೆ. ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರು ತಮ್ಮ ಉದ್ಯಮ, ಯುವಕರಿಗೆ ಪ್ರೇರಣೆ ನೀಡುವ ಹೇಳಿಕೆಗಳ ಮೂಲಕವೇ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಆದರೆ, ಅವರ ಸಂಸ್ಥೆ ಮಾತ್ರ ಸಣ್ಣ ಪ್ರಮಾಣದ ದಂಡದ ಶಿಕ್ಷೆಗೆ ಗುರಿಯಾಗಿ ಸುದ್ದಿಯಲ್ಲಿದೆ. ಹಾಗೆ ನೋಡಿದರೆ ಇನ್ಫೋಸಿಸ್‌ಗೆ ಈ ಸಣ್ಣ ಪ್ರಮಾಣದ ದಂಡದಿಂದ ಸಂಸ್ಥೆಯ ಆರ್ಥಿಕ ವಹಿವಾಟಿನ ಮೇಲೆ ಯಾವುದೇ ಪರಿಣಾಮ ಉಂಟಾಗೋದಿಲ್ಲ.

ಭಾರತ ಸೇರಿದಂತೆ ಹಲವೆಡೆ ಇನ್ಫೋಸಿಸ್‌ಗೆ ದಂಡ!

ಆಗಸ್ಟ್‌ 2023ರಲ್ಲೂ ಕೂಡಾ ಫ್ಲೋರಿಡಾದ ಕಂದಾಯ ಇಲಾಖೆಯು ಇನ್ಫೋಸಿಸ್‌ಗೆ 76 ಅಮೆರಿಕನ್ ಡಾಲರ್ ದಂಡ ವಿಧಿಸಿತ್ತು. ಅಕ್ಟೋಬರ್ 2023ರಲ್ಲೂ ಇನ್ಫೋಸಿಸ್ ಸಂಸ್ಥೆ ದಂಡ ಕಟ್ಟಿತ್ತು. ಕಾಮನ್‌ವೆಲ್ತ್‌ ಆಫ್ ಮಸಾಚುಸೆಟ್ಸ್‌ನಿಂದ 1,101.96 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿತ್ತು. ಇತ್ತ ಭಾರತದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಕೂಡಾ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ 26.5 ಲಕ್ಷ ರೂ. ಬಾಕಿ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ನೀಡಿತ್ತು. ಇನ್ಫೋಸಿಸ್ ಸಂಸ್ಥೆಯು ಕೇಂದ್ರೀಯ ಜಿಎಸ್‌ಟಿ ಉಳಿಸಿಕೊಂಡಿದ್ದ ಕಾರಣ ತೆರಿಗೆ ಜೊತೆಯಲ್ಲೇ ವಿಳಂಬ ದಂಡವನ್ನೂ ಸೇರಿಸಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದನ್ನು ಸ್ಮರಿಸಬಹುದು.

Shares:

Related Posts

Leave a Reply

Your email address will not be published. Required fields are marked *