ಚುನಾವಣೆರಾಜಕೀಯ

Union Budget 2024: ‘ಪಿಕ್ಚರ್ ಅಭಿ ಬಾಕಿ ಹೈ’: ಬಜೆಟ್‌ನಲ್ಲಿ ಚುನಾವಣೆ ಗೆಲುವಿನ ಆತ್ಮವಿಶ್ವಾಸ

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೋದಿ 2.0 ಸರಕಾರದ ಕೊನೆಯ ಆಯವ್ಯಯವನ್ನು ಗುರುವಾರ ಮಂಡಿಸಿದ್ದಾರೆ. ಯಾವುದೇ ಜನಪ್ರಿಯತೆಗೆ ಜೋತು ಬೀಳದೆ, ಯಾವುದೇ ಮಹತ್ವದ ಹೊಸ ಘೋಷಣೆಗಳನ್ನು ಮಾಡದೆ ‘ಸೀದಾ-ಸಾದಾ’ ಮಧ್ಯಂತರ ಆಯವ್ಯಯವನ್ನು ಮುಂದಿಟ್ಟಿದ್ದಾರೆ. ಆ ಮೂಲಕ ಚುನಾವಣಾ ಬಜೆಟ್‌ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ನಿರಾಸೆ ಮೂಡಿಸಿದ್ದಾರೆ.

ಆದರೆ ಸರಕಾರ, ಬಜೆಟ್‌ನ ಪ್ರಸ್ತಾಪಗಳನ್ನು ಸಮರ್ಥಿಸಿಕೊಂಡಿದೆ. ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚದಲ್ಲಿ ಹೆಚ್ಚಳ, ಉದ್ಯಮಗಳಿಗೆ ಉತ್ತೇಜನ, ವಿತ್ತೀಯ ಶಿಸ್ತಿಗೆ ಬದ್ಧತೆ ಮುಂತಾದ ಕ್ರಮಗಳ ಮೂಲಕ ‘ವಿಕಸಿತ ಭಾರತ’ಕ್ಕೆ ಅಡಿಪಾಯ ಹಾಕಲಾಗಿದೆ. ‘ಪಿಕ್ಚರ್ ಅಭಿ ಬಾಕಿ ಹೈ’ ಎನ್ನುವ ಮೂಲಕ ದೀರ್ಘಾವಧಿಯಲ್ಲಿ ಇದರ ಫಲ ಸಿಗಲಿದೆ ಎಂದು ಸರಕಾರ ಪ್ರತಿಪಾದಿಸಿದೆ. ಕಾರ್ಪೊರೇಟ್‌ ವಲಯವು ಬಜೆಟ್‌ ಬಗ್ಗೆ ಆಶಾಭಾವ ವ್ಯಕ್ತಪಡಿಸಿದೆ. ಹೊಸ ಸರಕಾರ ರಚನೆಯಾದ ಬಳಿಕ, ಜೂನ್‌ ಅಥವಾ ಜುಲೈನಲ್ಲಿ ಪೂರ್ಣಾವಧಿ ಬಜೆಟ್‌ ಮಂಡನೆಯಾಗಲಿದ್ದು, ಆಗಲಾದರೂ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

‘ಸಾದಾ’ ಬಜೆಟ್‌ಗೆ ಕಾರಣವೇನು?

2019ರಲ್ಲೂ ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್‌ ಮಂಡಿಸಲಾಗಿತ್ತು. ಆದರೆ, ಆಗ ಚುನಾವಣೆಯ ಮೇಲೆ ಕಣ್ಣಿಟ್ಟು ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು. ಏಕೆಂದರೆ, ಆಗ ಬಜೆಟ್‌ಗೆ ಮುನ್ನ ನಡೆದಿದ್ದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತ್ತು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡುತ್ತಿತ್ತು. ಮತದಾರರನ್ನು ಸೆಳೆಯುವ ಗುರಿಯೊಂದಿಗೆ ಮಧ್ಯಂತರ ಬಜೆಟ್‌ನಲ್ಲೇ ಭರ್ಜರಿ ಕೊಡುಗೆಗಳ ಮಹಾಪೂರ ಹರಿಸಲಾಗಿ

ಟ್ಯಾಕ್ಸ್‌ ರಿಲೀಫ್‌ ಇಲ್ಲ

  • ಆದಾಯ ತೆರಿಗೆ ದರದಲ್ಲಾಗಲೀ, ಸ್ಪ್ಯಾಬ್‌ಗಳಲ್ಲಾಗಲೀ ಯಾವುದೇ ಬದಲಾವಣೆ ಇಲ್ಲ
  • ಹಳೆ ತೆರಿಗೆ ಪದ್ಧತಿಯಲ್ಲಿ5 ಲಕ್ಷ ರೂ.ವರೆಗೆ/ ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಮುಂದುವರಿಕೆ
  • ಪರೋಕ್ಷ ತೆರಿಗೆಯಲ್ಲೂ ಬದಲಾವಣೆ ಇಲ್ಲದ ಕಾರಣ ಯಾವುದೇ ವಸ್ತುಗಳ ದರಗಳ ಮೇಲೆ ಬಜೆಟ್‌ ಪರಿಣಾಮವಿಲ್ಲ

ಪ್ರವಾಸೋದ್ಯಮಕ್ಕೆ ಉತ್ತೇಜನ

  • ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳಿಗೆ ಬಡ್ಡಿ ರಹಿತ ಸಾಲ
  • ಲಕ್ಷದ್ವೀಪಕ್ಕೆ ಪ್ರವಾಸಿಗಳನ್ನು ಸೆಳೆಯಲು ಮೂಲಸೌಕರ್ಯ ಅಭಿವೃದ್ಧಿ
  • ಉಡಾನ್‌ ಯೋಜನೆಯಡಿ 517 ಹೊಸ ಮಾರ್ಗಗಗಳಲ್ಲಿ ವಿಮಾನ

ಆರೋಗ್ಯ, ನಾರಿ ಶಕ್ತಿ

  • ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೆ ‘ಆಯುಷ್ಮಾನ್‌ ಭಾರತ್‌’ ವಿಸ್ತರಣೆ
  • 9-14 ವರ್ಷ ವಯೋಮಾನದ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್‌ ಲಸಿಕೆ
  • ‘ಇಂದ್ರಧನುಷ್‌’ ಯೋಜನೆ ದೇಶಾದ್ಯಂತ ವಿಸ್ತರಣೆ
  • ಲಕ್ಷಾಧಿಪತಿ ದೀದಿಯರ ಸಂಖ್ಯೆ 3 ಕೋಟಿಗೆ ಹೆಚ್ಚಿಸಲು ಕ್ರಮ

ಸ್ವಂತ ಸೂರಿಗೆ ನೆರವು

  • ನಗರಗಳ ಕೊಳಗೇರಿ, ಅಕ್ರಮ ಕಾಲೊನಿ ಮತ್ತು ಬಾಡಿಗೆ ಮನೆಯಲ್ಲಿರುವ ಅರ್ಹ ಮಧ್ಯಮವರ್ಗದವರಿಗೆ ಸ್ವಂತ ಮನೆ ಖರೀದಿ, ನಿರ್ಮಾಣಕ್ಕೆ ಹೊಸ ಯೋಜನೆ
  • ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 5 ವರ್ಷದಲ್ಲಿ ಇನ್ನೂ 2 ಕೋಟಿ ಮನೆ ನಿರ್ಮಾಣ

18000 ಕೋಟಿ ರೂ. ವಿದ್ಯುತ್‌ ಬಿಲ್‌ ಉಳಿತಾಯ

1 ಕೋಟಿ ಮನೆಗಳ ಮೇಲೆ ಸೋಲಾರ್‌ ವಿದ್ಯುತ್‌ ಫಲಕ ಅಳವಡಿಕೆ ಮೂಲಕ 300 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಪಡೆಯಲು ಅವಕಾಶ; ವಾರ್ಷಿಕ 18,000 ಕೋಟಿ ರೂ. ಮೌಲ್ಯದ ವಿದ್ಯುತ್‌ ಬಿಲ್‌ ಉಳಿತಾಯಕ್ಕೆ ಕ್ರಮ.

ಕೃಷಿ

  • ಸುಗ್ಗಿಯ ನಂತರದ ಚಟುವಟಿಕೆಯಲ್ಲಿಖಾಸಗಿ ಮತ್ತು ಸರ್ಕಾರಿ ಹೂಡಿಕೆಗೆ ಉತ್ತೇಜನ
  • ಐದು ಇಂಟಿಗ್ರೇಟೆಡ್‌ ಆಕ್ವಾ ಪಾರ್ಕ್ ಸ್ಥಾಪಿಸಲಾಗುವುದು
  • ಮೀನುಗಾರಿಕೆ ಉತ್ತೇಜಿಸಲು ‘ಬ್ಲೂಎಕಾನಮಿ 2.0’ ಪ್ರಾರಂಭಕ್ಕೆ ನಿರ್ಧಾರ

ರೈಲು/ಸಾರಿಗೆ

  • 40,000 ಸಾಮಾನ್ಯ ರೈಲು ಬೋಗಿಗಳನ್ನು ಅತಿ ವೇಗದ ‘ವಂದೇ ಭಾರತ್‌’ ಬೋಗಿಗಳಾಗಿ ಪರಿವರ್ತನೆ
  • ಸರಕು-ಸಾಗಣೆ ದಕ್ಷತೆ ಸುಧಾರಣೆ, ವೆಚ್ಚ ಇಳಿಕೆಗೆ ಮೂರು ಪ್ರಮುಖ ‘ರೈಲ್ವೇ ಕಾರಿಡಾರ್‌’ ಅಭಿವೃದ್ಧಿ

‘ಚುನಾವಣಾ ಬಜೆಟ್‌’ನಲ್ಲಿ ತೆರಿಗೆ ಕಡಿತವಿಲ್ಲ, ಜನಪ್ರಿಯ ಘೋಷಣೆಗಳಿಲ್ಲ! ಮತ್ತೆ ಗೆಲ್ಲುವ ಸಂದೇಶ ರವಾನೆ!

ಪ್ರಮುಖ ವಲಯವಾರು ಹಂಚಿಕೆ

  • ಮೂಲಸೌಕರ್ಯ: 11.11 ಲಕ್ಷ ಕೋಟಿ ರೂ.
  • ರಕ್ಷಣೆ : 6.25 ಲಕ್ಷ ಕೋಟಿ ರೂ., 4% ಹೆಚ್ಚಳ, ಬಜೆಟ್‌ ಒಟ್ಟು ಗಾತ್ರದ 13.2% ಪಾಲು
  • ಕೃಷಿ, ರೈತರ ಕಲ್ಯಾಣ: 1.27 ಲಕ್ಷ ಕೋಟಿ ರೂ.
  • ಶಿಕ್ಷಣ: 1.24 ಲಕ್ಷ ಕೋಟಿ ರೂ.
  • ಆರೋಗ್ಯ: 90,171 ಕೋಟಿ

ಅಂಕಿಗಳಲ್ಲಿ ಬಜೆಟ್‌

  • 47.66 ಲಕ್ಷ ಕೋಟಿ ರೂ: ಬಜೆಟ್‌ ಒಟ್ಟು ಗಾತ್ರ
  • 6.1: ಬಜೆಟ್‌ ಗಾತ್ರದಲ್ಲಿ ಈ ಬಾರಿ ಹೆಚ್ಚಳ
  • 44.90 ಲಕ್ಷ ಕೋಟಿ ರೂ.: ಪರಿಷ್ಕೃತ ಟ್ಟು ವೆಚ್ಚದ ಅಂದಾಜು
  • 5.8%: ವಿತ್ತೀಯ ಕೊರತೆ ಅಂದಾಜು
  • 10.5%: ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ
Shares:

Related Posts

Leave a Reply

Your email address will not be published. Required fields are marked *