ರಾಜಕೀಯ

ಸಾಣಾಪುರ ಬಳಿಯ ಹೋಂ ಸ್ಟೇ ಪ್ರಕರಣ.. ತಪ್ಪಿತಸ್ಥರ ವಿರುದ್ಧ ಕ್ರಮ : ಸಚಿವ ತಂಗಡಗಿ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿಯ ಹೋಂ ಸ್ಟೇ ಪ್ರಕರಣದ ಕುರಿತು ಮಾಹಿತಿ ಪಡೆಯಲಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರಾತ್ರಿ ವೇಳೆ ಪ್ರವಾಸಿಗರು ಹೊರ ಹೋಗಬಾರದಿತ್ತು. ಇಂತಹ ಘಟನೆಗಳು ನಡೆಯಬಾರದು.
ಹೀಗಾಗಿ ಈ ಭಾಗದಲ್ಲಿ ಪೊಲೀಸ್ ತಂಡ ಹಾಕಲು ಹೇಳಿದೆ. ಇಲ್ಲಿ ಅಕ್ರಮ ಚಟುವಟಿಕೆ ಬಂದ್ ಮಾಡಿದ್ದೇವೆ. ಅಲ್ಲಿ ವನ್ಯ ಪ್ರಾಣಿಗಳಿವೆ
ಸಣ್ಣ ವಿಷಯಕ್ಕೆ ಒಂದು ಪ್ರಾಣ ಹೋಗಿದೆ. ಈ ಕುರಿತು ತನಿಖೆಯಾಗುತ್ತದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
ಈ ಕುರಿತು ಖಂಡಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇನ್ನು ಕನಕಗಿರಿ ಉತ್ಸವ ಜನರ ಉತ್ಸವಕ್ಕೆ ಸಿದ್ದತೆ ನಡೆದಿತ್ತು.
ಕೆಲವರು ವಯಕ್ತಿಕ ಕಾರಣಕ್ಕೆ ಪ್ರತಿಭಟನೆ ಮಾಡುತ್ತೇನೆ ಎಂದಿದ್ದರು. ಮುಂದೆ ನೋಡೋಣ ಎಂದರು.
ಬಿಎಸ್ಪಿಎಲ್ ಕಾರ್ಖಾನೆ ಕೆಲಸ ಬಂದ್ ಮಾಡಿಸಲಾಗಿದೆ
ಈ ವಾರದಲ್ಲಿ ಸಭೆ ಮಾಡಿ ಅಧಿಕೃತ ಆದೇಶ ನೀಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

Shares:

Leave a Reply

Your email address will not be published. Required fields are marked *