ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ವಿದೇಶಿ ಸೇರಿ ದೇಶೀಯ ಪ್ರಜೆಗಳ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಇಂದು ಪತ್ತೆಯಾಗಿದೆ. ಗುರುವಾರ ರಾತ್ರಿ ನಡೆದಿದ್ದ ಘಟನೆಯಲ್ಲಿ ಮೂವರನ್ನು ಕಾಲುವೆಗೆ ದೂಡಲಾಗಿತ್ತು. ಆ ಪೈಕಿ ಇಬ್ಬರು ಈಜಿ ದಡಕ್ಕೆ ವಾಪಸ್ ಆಗಿದ್ದರು. ಆದರೆ ಒರಿಸ್ಸಾ ಮೂಲದ ಇನ್ನೊಬ್ಬ ವ್ಯಕ್ತಿಯ ವ್ಯಕ್ತಿಯ ಸುಳಿವು ಸಿಕ್ಕಿರಲಿಲ್ಲ. ಒರಿಸ್ಸಾ ಮೂಲದ ಬಿಬಾಸ್ ಎನ್ನುವ ವ್ಯಕ್ತಿಯ ಮೃತ ದೇಹ ಇಂದು ಬೆಳಿಗ್ಗೆ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಪತ್ತೆಯಾಗಿದೆ. ಬಿಬಾಸ್ ಮೃತದೇಹ ಗಂಗಾವತಿಯ ಮಲ್ಲಾಪುರ ಪವರ್ ಸ್ಟೇಶನ್ ಗೇಟ್ ಹತ್ತಿರ ಪತ್ತೆಯಾಗಿದೆ. ಗುರುವಾರ ರಾತ್ರಿ ೧೧ ಗಂಟೆಯ ಸುಮಾರಿಗೆ ಸಾಣಾಪುರ ಹತ್ತಿರ ರೆಸಾರ್ಟ್ ಮಾಲಿಕ ಮಹಿಳೆ ಹಾಗೂ ಇಬ್ಬರು ವಿದೇಶಿ ಪ್ರಜೆಗಳು, ಓರ್ವ ನಾಸಿಕ್ ಮತ್ತು ಓರ್ವ ಒರಿಸ್ಸಾದ ಒಟ್ಟು ಐವರು ಗಿಟಾರ್ ನುಡಿಸುತ್ತ ಕುಳಿತಿದ್ದರು. ಆ ಸಂದರ್ಭದಲ್ಲಿ
ಅಲ್ಲಿಗೆ ಬೈಕ್ ನಲ್ಲಿ ಬಂದಿದ್ದ ಮೂವರ ಪೆಟ್ರೋಲ್ ಗೆ ಹಣ ಕೇಳಿದಾಗ ಇವರು 20 ರೂಪಾಯಿ ಕೊಡಲು ಹೋದಾಗ ದುಷ್ಟರು 100 ರೂಪಾಯಿ ಬೇಕು ಎಂದು ವಾಗ್ವಾದ ಮಾಡಿ ಜಗಳ ಆರಂಭಿಸಿದ್ದರು. ಆಗ ದುಷ್ಟರು ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ನೂಕಿದ್ದಾರೆ. ಅವರಲ್ಲಿ ಇಬ್ಬರು ಈಜಿಕೊಂಡು ಮೇಲೆ ಬಂದಿದ್ದರೆ ಒರಿಸ್ಸಾ ಮೂಲದ ಬಿಬಾಸ್ ಕಾಣೆಯಾಗಿದ್ದ.
ಶನಿವಾರ ಬೆಳಗ್ಗೆ ಬಿಬಾಸ್ ಶವ ತುಂಗಭದ್ರಾ ಎಡದಂಡೆ ನಾಲೆ ಮಲ್ಲಾಪುರ ಪವರ್ ಸ್ಟೆಷನ್ ಗೇಟ್ ಬಳಿ ಪತ್ತೆಯಾಗಿದೆ. ಆರೋಪಿಗಳ ಸುಳಿವು ಲಭ್ಯವಾಗಿದ್ದು ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ ಹೇಳಿದ್ದಾರೆ.
ದೇಶಿ ಹಾಗೂ ವಿದೇಶಿ ಪ್ರಜೆಗಳ ಮೇಲೆ ಹಲ್ಲೆ ಘಟನೆ… ಕಾಲುವೆಯಲ್ಲಿ ವ್ಯಕ್ತಿ ಶವ ಪತ್ತೆ
Shares: