ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಗರ ತಲೆಯಲ್ಲಿ ಏನಿಲ್ಲ, ಏನಿಲ್ಲ, ಬಿಜೆಪಿಗರ ತಲೆಯಲ್ಲಿ ಏನಿಲ್ಲ ಎಂದು ಲೇವಡಿ ಮಾಡಿದ್ದಾರೆ. ರಾಜ್ಯಪಾಲರಿಂದ ಸುಳ್ಳು ಹೇಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕಾಂಗ್ರೆಸ್ ಗ್ಯಾರಂಟಿಯ ಪರಿಣಾಮಗಳನ್ನು ವಿವರಿಸಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿದ್ದ ಅಕ್ಕಿ ಕೊಡದೆ ಈಗ 29 ರೂಗೆ ಮಾರುತ್ತಿದ್ದಾರೆ ಎಂದರು.

ಹೈಲೈಟ್ಸ್:
- ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ
- ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲು ಸಾಧ್ಯವೇ? ಜೆಪಿಗರ ತಲೆಯಲ್ಲಿ ಏನಿಲ್ಲ ಎಂದು ಸಿಎಂ ತರಾಟೆ
- ರಾಜ್ಯದ ಜೊತೆ ಅಕ್ಕಿ ರಾಜಕೀಯ ಮಾಡಿದ ಕೇಂದ್ರ ಸರ್ಕಾರ ಇದೀಗ 29 ರೂಪಾಯಿಗೆ ಅಕ್ಕಿ ಕೊಡುತ್ತಿದೆ
ಬೆಂಗಳೂರು: ಏನಿಲ್ಲ, ಏನಿಲ್ಲ ಬಿಜೆಪಿಗರ ತಲೆಯಲ್ಲಿ ಏನಿಲ್ಲ! ಹೀಗೆ ತ್ರಾಸ ಬದ್ಧವಾಗಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು ಸಿಎಂ ಸಿದ್ದರಾಮಯ್ಯ. ಮಂಗಳವಾರ ಸದನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲು ಸಾಧ್ಯವೇ? ಸುಳ್ಳು ಬಿಜೆಪಿಗರ ಮನೆ ದೇವರು ಎಂದು ತಿರುಗೇಟು ನೀಡಿದರು.