ಪಂದ್ಯಾವಳಿಯು ಮಧ್ಯಪ್ರದೇಶದ ಭೋಪಾಲ್‌ನ ಎಲ್ ಎನ್ ಸಿ ಟಿ ಯು ವಿಶ್ವವಿದ್ಯಾಲಯದಲ್ಲಿ ನಡೆದ
ಇಂಟರ್ ಯೂನಿವರ್ಸಿಟಿ ದಕ್ಷಿಣ ಮತ್ತು ಪಶ್ಚಿಮ ವಲಯದ ಅಂತರ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ, ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ ವಿದ್ಯಾರ್ಥಿನಿ ಕುಮಾರಿ ವಂದಿತಾ ಜೋಶಿ ವಿಜೇತರಾಗಿದ್ದಾರೆ.

ವಿಜೇತರಾದ ವಂದಿತಾ ಜೋಶಿ ವಿಟಿಯು ಕರಾಟೆ ತಂಡ ಪ್ರತಿನಿಧಿಸಿ ಪಂದ್ಯಾವಳಿಯಲ್ಲಿ 3 ನೇ ಸ್ಥಾನ ಪಡೆದು ಮತ್ತು ಅಖಿಲ ಭಾರತ ಇಂಟರ್ ಯೂನಿವರ್ಸಿಟಿ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ಇವರ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಂದಿತ ಜೋಶಿ ಅವರನ್ನು ಅಭಿನಂದಿಸಿದ್ದಾರೆ.