ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆನಂದನಗರ ಕುಷ್ಠರೋಗ ಆಸ್ಪತ್ರೆಯ ಎದುರಿಗೆ ಇರುವ ಶೆಡ್ ಬಳಿ 9 ಜನರು ಗಾಂಜಾ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮೀರಜ್ ನ ಅಶ್ಫಾಕ್ ಮುಲ್ಲಾ, ತುಮಕೂರನ ಶಿವಕುಮಾರ್, ಹಳೇ ಹುಬ್ಬಳ್ಳಿಯ ಇಕ್ಬಾಲ್ ಅಹ್ಮದ್ ಮುದಗಲ್, ಆರೀಫ್ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹೃದರೆಹಾನ ಗೋಕಾಕ್, ಸಾಧೀಕ ಕಿತಾಬ್ ವಾಲೆ, ಮೆಹಬೂಬ್ ಸಾಬ್ ಮಕಂದಾರ ಎಂಬಾತರೇ ಬಂಧಿತರಾಗಿದ್ದಾರೆ.
ಬಂಧಿತರಿಂದ 1,25,000 ರೂ. ಮೌಲ್ಯದ 1500 ಗ್ರಾಂ ಗಾಂಜಾ, 60 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ಹಾಗೂ 2. ಸಾವಿರ ರೂ. ನಗದು ಸೇರಿ, ಒಟ್ಟು 1,87,000 ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕುರಿತು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.