ಉತ್ತರ ಕರ್ನಾಟಕ

ಕಲಿಯುಗದ ಕುಡುಕ ರಂಗಾಯಣದ ನಿರ್ದೇಶಕ : ರಾಜು ತಾಳಿಕೋಟೆ ನೇಮಕ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ..!

ಧಾರವಾಡ : ಕಳೆದ ಒಂದು ವರ್ಷದಿಂದ ನೆನಗುದಿಗೆ ಬಿದ್ದಿದ್ದ ರಾಜ್ಯದ ಆರು ರಂಗಾಯಣ ನಿರ್ದೇಶಕರ ನೇಮಕ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದ್ದು ರಾಜ್ಯದ ಆರು ರಂಗಾಯಣಗಳಿಗೆ ನೂತನ ನಿರ್ದೇಶಕರನ್ನು ರಾಜ್ಯ ಸರಕಾರ ನೇಮಕ ಮಾಡಿದ್ದು ಧಾರವಾಡದ ರಂಗಾಯಣಕ್ಕೆ ನೂತನ ನಿರ್ದೇಶಕರನ್ನಾಗಿ ಬಿಜಾಪೂರ ಮೂಲದ ಖ್ಯಾತ ರಂಗ ಕಲಾವಿದ ಹಾಗೂ ಕನ್ನಡ ಚಿತ್ರರಂಗದ ಹಾಸ್ಯನಟ ರಾಜು ತಾಳಿಕೋಟಿಯವರನ್ನು ನೇಮಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿಯವರು ಈ ನೇಮಕ ಮಾಡಿದ್ದು “ಕಲಿಯುಗದ ಕುಡುಕ” ಖ್ಯಾತಿಯ ರಾಜು ತಾಳಿಕೋಟಿ ಶೀಘ್ರದಲ್ಲಿಯೇ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಇನ್ನೂ ಮುಂದೆ ಧಾರವಾಡದ ರಂಗಾಸಕ್ತರು, ಕಲಾಪ್ರೇಮಿಗಳು ಸೇರಿದಂತೆ ರಂಗಕಲಾವಿದರಿಗೂ ರಂಗ”ನಶೆ”ಯೇರಿಸಲಿದ್ದಾರೆ

ಹಿಂದಿನ ಅವಧಿಗೆ ನಿರ್ದೇಶಕರಾಗಿದ್ದ ರಮೇಶ ಪರವಿನಾಯ್ಕರ ಇಚ್ಚಾಶಕ್ತಿಯಿಂದ ರಂಗಾಯಣದ ಕಾರ್ಯಚಟುವಟಿಕೆಗಳು ಒಂದಿಷ್ಟೂ ಚೇತರಿಕೆ ಕಂಡಿದ್ದು ತದನಂತರ ಸೊರಗಿ ಹೋಗಿರುವ ರಂಗಾಯಣಕ್ಕೆ ಹೊಸ ಕಳೆ ತರುವ ನಿಟ್ಟಿನಲ್ಲಿ ರಾಜು ತಾಳಿಕೋಟಿ ಕೆಲಸ ಮಾಡಬೇಕಿದೆ

ರಂಗಭೂಮಿಯ ಏಳುಬೀಳು, ಒಳಹೊರಗನ್ನೂ ಬಲ್ಲ ಅನುಭವಿ ರಾಜು ತಾಳಿಕೋಟಿಯವರು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ರಂಗ ಪರಂಪರೆಯ ವಿನೂತನ ಪ್ರಯೋಗಗಳ ಮುಖಾಂತರ ರಂಗಕಾರ್ಯಕ್ರಮಗಳಿಗೆ ಇನ್ನಷ್ಪೂ ಜೀವ ತುಂಬಿ
ರಂಗಭೂಮಿಯ ಹಿರಿಯ ಚೇತನ “ಬಿ.ವಿ.ಕಾರಂತರ” ಆಶಯದಂತೆ ನಾಡಿನ ರಂಗ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಹಾಗೂ ಧಾರವಾಡದ ರಂಗಾಯಣವನ್ನು ಮಾದರಿಯನ್ನಾಗಿಸುವಲ್ಲಿ ನೂತನ ನಿರ್ದೇಕರೂ ಶ್ರಮಿಸುವ ಜರೂರಿಯಿದೆ

Leave a Reply

Your email address will not be published. Required fields are marked *