ಧಾರವಾಡ : ಅಂದ ಮತ್ತು ದೈಹಿಕ ಅಂಗವಿಕಲತೆಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಕಾಲೇಜಿನ ಡಾ. ವಿ.ಕೃ.ಗೋಕಾಕ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಸಮರ್ಥನಂ ಸಂಸ್ಥೆಯ ಮುಂದೆ ಬಂದಿದೆ. ಕಳೆದ ಶುಕ್ರವಾರದಂದು ಸಮರ್ಥನಂ ಸಂಸ್ಥೆಯ ಹಿರಿಯ ಅಧಿಕಾರಿಗಳು ಕರ್ನಾಟಕ ಕಾಲೇಜಿನ ಐತಿಹಾಸಿಕ ಕಟ್ಟಡ ಮತ್ತು ಕಾಲೇಜಿನ ಡಾ.ವಿ.ಕೃ.ಗೋಕಾಕ ಗ್ರಂಥಾಲಯಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶಿಲಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಅಕಾಡೆಮಿಕ್ ಡೀನ್ ಡಾ.ಮುಕುಂದ ಲಮಾಣಿ ಸಮರ್ಥನಂ ಸಂಸ್ಥೆಯ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಕಾಲೇಜಿನ ಕುರಿತು ಮತ್ತು ವಿದ್ಯಾರ್ಥಿಗಳ ಮಾಹಿತಿ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಲಾ ಕಾಲೇಜಿನ ಅಕಾಡೆಮಿಕ್ ಡೀನ್ ಡಾ.ಮುಕುಂದ ಲಮಾಣಿ, ಐ.ಕ್ಯೂಎ.ಸಿ ವಿಭಾಗದ ಸಂಯೋಜಕ ಡಾ. ಐ.ಸಿ.ಮುಳುಗುಂದ, ಡಾ.ಎ.ಸಿ.ಕುರಹಟ್ಟಿ, ಗ್ರಂಥಪಾಲಕರಾದ ಡಾ.ಅಶೋಕ ಆಲಕಟ್ಟಿ, ಡಾ. ನಾಗೇಶ ಕುಸಗಲ್, ಸಮರ್ಥನಂ ಸಂಸ್ಥೆಯ ಪ್ಯಾನ್ ಇಂಡಿಯಾ ಆಪರೇಷನ್ ಮುಖ್ಯಸ್ಥರಾದ ಶಿವರಾಮ ದೇಶಪಾಂಡೆ, ಸಮರ್ಥನಂ ತ ಸಂಯೋಜಕ ರಾಘವೇಂದ್ರ, ಸ್ಟ್ಯಾಂಡರ್ಡ್ ಚಾರ್ಟಡ್ ಬ್ಯಾಂಕಿನ ಅಧಿಕಾರಿ ಪಿನಾಕಿ, ಧಾರವಾಡದ ಸಮರ್ಥನಂ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಕೃಷ್ಣಾ ಮತ್ತು ಸುಹಾಸ ಮತ್ತು ಪ್ರವೀಣ ಜಾಧವ್, ಸೇರಿದಂತೆ ಇತರರು ಇದ್ದರು.